ಹುಬ್ಬಳ್ಳಿ: ಒಎಲ್ಎಕ್ಸ್ನಲ್ಲಿ ಜಾಹೀರಾತು ನೋಡಿ, ಮೊಬೈಲ್ ಖರೀದಿಸುವ ನೆಪದಲ್ಲಿ ಬಂದು ಮೊಬೈಲ್ ಸುಲಿಗೆ ಮಾಡುತ್ತಿದ್ದ ಇಬ್ಬರು ಸುಲಿಗೆಕೋರರನ್ನು ಬಂಧಿಸುವಲ್ಲಿ ಎಪಿಎಂಸಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಕಾಶ ಮುರಳಿಧರ ಮುದಲಿಯಾರ್(20),ಆಕಾಶ ಮಾರುತಿ ಮೂಳೆ(20) ಬಂಧಿತ ಆರೋಪಿಗಳು. ಈ ಆರೋಪಿತರಿಂದ 2,86,497 ಮೌಲ್ಯದ 8 ಮೊಬೈಲ್ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಆಯುಕ್ತ ಆರ್.ದಿಲೀಪ್ ಅಭಿನಂದನೆ ಸಲ್ಲಿಸಿದ್ದಾರೆ.