ETV Bharat / state

ಸರ್ಕಾರದ ಲಾಕ್​ಡೌನ್​ ಸಡಿಲಿಕೆ ಚಿಂತನೆಗೆ ಹೊರಟ್ಟಿ ವಿರೋಧ - ವಿಧಾನ‌ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿಕೆ

ರಾಜ್ಯ ಸರ್ಕಾರ ಲಾಕ್​ಡೌನ್​ನಲ್ಲಿ ವಿನಾಯಿತಿ ನೀಡಿವುದು ನನಗೆ ಸರಿ ಅನಿಸುತ್ತಿಲ್ಲ ಎಂದು ವಿಧಾನ‌ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

MLC Horatti oppose to relaxation in lockdown
ವಿಧಾನ‌ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ
author img

By

Published : Apr 18, 2020, 9:09 PM IST

ಹುಬ್ಬಳ್ಳಿ: ಏಪ್ರಿಲ್ 20ರ ನಂತರ ದ್ವಿಚಕ್ರ ವಾಹನ ಸವಾರರಿಗೆ ರಿಲಾಕ್ಸ್ ನೀಡುವ ಸರ್ಕಾರದ ಚಿಂತನೆಗೆ ವಿಧಾನ‌ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ವಿರೋಧ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಚಿಂತನೆಗೆ ಪರಿಷತ್ ಸದಸ್ಯ ಹೊರಟ್ಟಿ ವಿರೋಧ

ನಗರದಲ್ಲಿ ಮಾತನಾಡಿದ ವಿಧಾನ‌ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಇಲ್ಲಿಯ ತನಕ ರಾಜ್ಯ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಸದ್ಯ ರಾಜ್ಯ ಸರ್ಕಾರ ಲಾಕ್​ಡೌನ್​​ನಲ್ಲಿ ವಿನಾಯಿತಿ ನೀಡಲು ನಿರ್ಧರಿಸಿರುವುದು ನನಗೆ ಸರಿ ಅನಿಸುತ್ತಿಲ್ಲ. ಈವರೆಗೆ ಗ್ರಾಮೀಣ ಭಾಗಗಳಲ್ಲಿ ಕೊರೊನಾ ಸೋಂಕು ಅಷ್ಟಾಗಿ ಹರಡಿದ್ದಿಲ್ಲ. ಆದರೆ ದ್ವಿಚಕ್ರ ವಾಹನ ಸವಾರರಿಗೆ ರಿಲ್ಯಾಕ್ಸ್ ನೀಡಿದರೆ ಗತಿ ಏನು? ಯಾರಲ್ಲಿ ಕೊರೊನಾ ಇರುತ್ತೆ ಅಂತ ಯಾರಿಗೆ ಗೊತ್ತು. ಆವಾಗ ಕೊರೊನಾ ಆತಂಕ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಈ ನಿರ್ಧಾರವನ್ನು ಮರುಪರಶೀಲನೆ ಮಾಡಬೇಕು. ತಮ್ಮ ನಿರ್ಧಾರ ಬದಲಿಸಲು ಸಿಎಂಗೆ ನಾನು ಮನವಿ ಮಾಡುತ್ತೇನೆ. ಮೇ 3ರವರೆಗೂ ಇದೇ ಪರಿಸ್ಥಿತಿ ಮುಂದುವರೆಸಬೇಕಿತ್ತು. ಈವಾಗಲೇ ಜನ ಮುಗಿಬೀಳುತ್ತಿದ್ದಾರೆ. ಇನ್ನು ರಿಲ್ಯಾಕ್ಸ್ ನೀಡಿದರೆ ಹೇಗೆ ಎಂದು‌ ಪ್ರಶ್ನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.