ETV Bharat / state

ಆದಷ್ಟು ಬೇಗ ಧಾರವಾಡ ಅನ್​​ಲಾಕ್​​: ಸಚಿವ ಜಗದೀಶ್​​ ಶೆಟ್ಟರ್​​ ಭರವಸೆ

ಸರ್ಕಾರ 10 ದಿನಗಳ ಪಾಸಿಟಿವಿಟಿ ರೇಟಿಂಗ್ ತೆಗೆದುಕೊಂಡಿದ್ದೇ ಅನ್​​ಲಾಕ್ ಆಗದಿರಲು ಕಾರಣ. ಆದಷ್ಟು ಬೇಗ ಅನ್​​​​ಲಾಕ್ ಮಾಡಿಸಲಾಗುವುದು-ಸಚಿವ ಜಗದೀಶ್ ಶೆಟ್ಟರ್

minister jagdish shetter
ಸಚಿವ ಜಗದೀಶ್​​ ಶೆಟ್ಟರ್
author img

By

Published : Jun 20, 2021, 2:21 PM IST

ಧಾರವಾಡ/ಹುಬ್ಬಳ್ಳಿ: ರಾಜ್ಯದಲ್ಲಿ 16 ಜಿಲ್ಲೆಗಳನ್ನು ಅನ್​​ಲಾಕ್ ಮಾಡಿ ಸರ್ಕಾರ ಆದೇಶ ನೀಡಿದೆ. ಆದರೆ ಶೇ. 4.01 ರಷ್ಟು ಪಾಸಿಟಿವಿಟಿ ದರ ಇದ್ದರೂ ಧಾರವಾಡ ಜಿಲ್ಲೆಯನ್ನು ಅನ್​​ಲಾಕ್ ಮಾಡಿಲ್ಲ. ಹೀಗಾಗಿ ಜಿಲ್ಲೆಯನ್ನು ಅನ್​​ಲಾಕ್ ಮಾಡಿ ಎಂದು ವರ್ತಕರ ಸಂಘದವರು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು.

ಪಾಸಿಟಿವಿಟಿ ದರ ಕಡಿಮೆಯಿದ್ದರೂ ಅನ್​​ಲಾಕ್ ಯಾಕಿಲ್ಲ? ಸಾರ್ವಜನಿಕರ ಪ್ರಶ್ನೆ

ವರ್ತಕರ ಬೇಡಿಕೆಗೆ ಸ್ಪಂದಿಸಿದ ಸಚಿವ ಜಗದೀಶ್​​ ಶೆಟ್ಟರ್ ಸಿಎಂ ಜೊತೆ ಮಾತನಾಡುವುದಾಗಿ ಭರವಸೆ ನೀಡಿದರು. ಸಿಎಂಗೆ ಕರೆ ಮಾಡಿ ವಾಸ್ತವ ಸ್ಥಿತಿಯನ್ನ ಹೇಳುತ್ತೇನೆ. ಈಗಾಗಲೇ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜತೆ ಚರ್ಚೆ ಮಾಡಿದ್ದೇನೆ. ಮಧ್ಯಾಹ್ನದ ನಂತರ ಡಿಸಿ ಮತ್ತು ಆರೋಗ್ಯಾಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ. ಸರ್ಕಾರ 10 ದಿನಗಳ ಪಾಸಿಟಿವಿಟಿ ರೇಟಿಂಗ್ ತೆಗೆದುಕೊಂಡಿದ್ದೆ ಅನ್​​ಲಾಕ್ ಆಗದಿರಲು ಕಾರಣ. ಆದಷ್ಟು ಬೇಗ ಅನ್​​​​ಲಾಕ್ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

ಪಾಸಿಟಿವಿಟಿ ದರ ಶೇ. 4.1 ಇದ್ರೂ ಸಹ ಅನ್​​ಲಾಕ್ ಯಾಕಿಲ್ಲ?:

ಜಿಲ್ಲೆಯಲ್ಲಿ ಕಳೆದ 7 ದಿನಗಳ ಕೊರೊನಾ ಸರಾಸರಿ ಪಾಸಿಟಿವಿಟಿ ದರ ಶೇ. 4.1 ಇದೆ. ಆದರೂ ಸಹ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯದಿಂದ ಸಿಎಂ ಅವರಿಗೆ ಸರಿಯಾದ ಮಾಹಿತಿ ನೀಡದೇ ಇರುವುದರಿಂದ ಅನ್​​ಲಾಕ್ ಆಗಿಲ್ಲ. ಆದ್ದರಿಂದ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿ ಅನ್​​ಲಾಕ್ ಬಗ್ಗೆ ವಿಚಾರ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಡೆಯುವ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಈ ಕುರಿತು ಚರ್ಚಿಸಿ, ಸರ್ಕಾರಕ್ಕೆ ಮತ್ತೊಮ್ಮೆ ಜಿಲ್ಲೆಯ ಪಾಸಿಟಿವಿಟಿ ದರದ ಮಾಹಿತಿ ನೀಡಲಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಪಾಸಿಟಿವಿಟಿ ದರದ ಬಗ್ಗೆ ಸರಿಯಾದ ಮಾಹಿತಿ ನೀಡಿದ್ದರೆ ಈಗಾಗಲೇ ಧಾರವಾಡ ಜಿಲ್ಲೆಯನ್ನ ಅನ್​​ಲಾಕ್ ಮಾಡುತ್ತಿದ್ದರು.

ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಸಮಸ್ಯೆ ಉದ್ದವಾಗಿದ್ದು, ಅದೆಷ್ಟೋ ವ್ಯಾಪಾರ ವಹಿವಾಟು ನಡೆಸುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನ್​​ಲಾಕ್ ಮಾಡುತ್ತಾರೆ ಎಂಬ ಆಲೋಚನೆಯಲ್ಲಿದ್ದ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಆದ್ದರಿಂದ ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡಿ ಜಿಲ್ಲೆಯನ್ನು ಅನ್​​ಲಾಕ್ ಮಾಡಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪಾಸಿಟಿವಿಟಿ ದರ ಕಡಿಮೆಯಿದ್ದರೂ ಅನ್​ಲಾಕ್ ಆಗದ ಧಾರವಾಡ: ಗೊಂದಲಕ್ಕೀಡಾದ ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.