ETV Bharat / state

ಧಾರವಾಡದಲ್ಲಿ ಹಿರಿಯ ಕವಿ ಕಣವಿ ಅವರನ್ನು ಭೇಟಿಯಾದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ

ಕನ್ನಡ ಕಲಿಕೆಗೆ ಧಕ್ಕೆ ಅಥವಾ ಅಪಾಯ ಇಲ್ಲ. ಒಂದು ವರ್ಷಕ್ಕೆ ಬದಲಾಗಿ ಎರಡು ವರ್ಷ ಮಾತೃಭಾಷೆ ಕಲಿಕೆಯನ್ನು ಕಡ್ಡಾಯ ಮಾಡಿರುವ ಅಂಶವನ್ನು ಗಮನಕ್ಕೆ ತಂದಾಗ ಕಣವಿ ಅವರು ಬಹಳ ಸಂತಸ ವ್ಯಕ್ತಪಡಿಸಿದರು. ಇದರಿಂದ ಕನ್ನಡಕ್ಕೆ ಬಹಳ ಒಳ್ಳೆಯದಾಗುತ್ತದೆ ಎಂದರು..

ಧಾರವಾಡದಲ್ಲಿ ಹಿರಿಯ ಕವಿ ಕಣವಿ ಅವರನ್ನು ಭೇಟಿಯಾದ ಸಚಿವ ಅಶ್ವತ್ಥನಾರಾಯಣ

author img

By

Published : Aug 21, 2021, 10:03 PM IST

ಧಾರವಾಡ : ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಸಂಬಂಧ ಧಾರವಾಡದಲ್ಲಿ ಇಂದು ಬೆಳಗ್ಗೆಯಿಂದ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರು, ಸಂಜೆ ಬೆಂಗಳೂರಿಗೆ ಹೊರಡುವ ಮುನ್ನ ಹಿರಿಯ ಕವಿ ಚನ್ನವೀರ ಕಣವಿ ಅವರನ್ನು ಭೇಟಿಯಾದರು.

ಧಾರವಾಡದ ಕಲ್ಯಾಣ ನಗರದಲ್ಲಿನ ಕಣವಿ ಅವರ ನಿವಾಸಕ್ಕೆ ತೆರಳಿದ ಸಚಿವರು, ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಅವರಿಗೆ ವಿವರಿಸಿದರು. ಸಚಿವರು ಹೇಳಿದ್ದೆಲ್ಲವನ್ನೂ ಸಾವಕಾಶವಾಗಿ ಕೇಳಿಸಿಕೊಂಡ ಕಣವಿಯವರು, ‘ರಾಷ್ಟ್ರೀಯ ಶಿಕ್ಷಣ ನೀತಿ ಸಮಗ್ರವಾಗಿದೆ. ಉತ್ತಮವಾಗಿ ಜಾರಿಗೆ ಬರಲಿ. ಆದರೆ, ಕನ್ನಡಕ್ಕೆ ಹಾಗೂ ಮಾತೃಭಾಷೆ ಶಿಕ್ಷಣಕ್ಕೆ ಎಲ್ಲೂ ಧಕ್ಕೆ ಆಗದಂತೆ ಜಾರಿ ಆಗಲಿ’ ಎಂದು ಹೇಳಿದರು.

ಹಿರಿಯ ಕವಿ ಕಣವಿ ಅವರ ಜತೆ ಸಚಿವ ಅಶ್ವತ್ಥನಾರಾಯಣ
ಹಿರಿಯ ಕವಿ ಕಣವಿ ಅವರ ಜತೆ ಸಚಿವ ಅಶ್ವತ್ಥ್ ನಾರಾಯಣ

ಕನ್ನಡ ಕಲಿಕೆಗೆ ಧಕ್ಕೆ ಅಥವಾ ಅಪಾಯ ಇಲ್ಲ. ಒಂದು ವರ್ಷಕ್ಕೆ ಬದಲಾಗಿ ಎರಡು ವರ್ಷ ಮಾತೃಭಾಷೆ ಕಲಿಕೆಯನ್ನು ಕಡ್ಡಾಯ ಮಾಡಿರುವ ಅಂಶವನ್ನು ಗಮನಕ್ಕೆ ತಂದಾಗ ಕಣವಿ ಅವರು ಬಹಳ ಸಂತಸ ವ್ಯಕ್ತಪಡಿಸಿದರು. ಇದರಿಂದ ಕನ್ನಡಕ್ಕೆ ಬಹಳ ಒಳ್ಳೆಯದಾಗುತ್ತದೆ ಎಂದರು.

‘ಒಳ್ಳೆಯದಾಗಲಿ, ಶಿಕ್ಷಣ ನೀತಿ ಜಾರಿಗೆ ಬಂದು ಎಲ್ಲರಿಗೂ ಉತ್ತಮ ಶಿಕ್ಷಣ ಸಿಗಲಿ. ಇದಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ’ ಎಂದು ಸಚಿವರಿಗೆ ಹೇಳಿದರು. ಕವಿವಿ ಕುಲಪತಿ ಪ್ರೊ.ಗುಡಸಿ ಹಾಗೂ ಕಣವಿ ಅವರ ಕುಟುಂಬ ಸದಸ್ಯರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.