ETV Bharat / state

ಮಹಿಳೆಯರ ಸುರಕ್ಷತೆಗಾಗಿ ನೈರುತ್ಯ ರೈಲ್ವೆ ಇಲಾಖೆಯಿಂದ ''ಮೇರಿ ಸಹೇಲಿ'' ಯೋಜನೆ

ಮುಂಬರುವ ದಿನಗಳಲ್ಲಿ ಹಬ್ಬಗಳಿರುವ ಹಿನ್ನೆಲೆ ವಿಶೇಷ ರೈಲು ಸೇವೆಗಳನ್ನು ಆರಂಭಿಸಲಾಗುತ್ತಿದೆ. ಹಾಗಾಗಿ ಮಹಿಳೆಯರ ಭದ್ರತೆಯ ದೃಷ್ಟಿಯಿಂದ ಹುಬ್ಬಳ್ಳಿ ವಿಭಾಗದ ಆರ್‌ಪಿಎಫ್ ‘ಮೇರಿ ಸಹೇಲಿ’ ಯೋಜನೆಯನ್ನು ಪ್ರಾರಂಭಿಸಿದೆ.

"meri saheli" program from Southwest Railway Department
ಮಹಿಳೆಯರ ಸುರಕ್ಷತೆಗಾಗಿ ನೈರುತ್ಯ ರೈಲ್ವೆ ಇಲಾಖೆಯಿಂದ 'ಮೇರಿ ಸಹೇಲಿ’ ಯೋಜನೆ
author img

By

Published : Oct 29, 2020, 5:15 PM IST

ಹುಬ್ಬಳ್ಳಿ: ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಹುಬ್ಬಳ್ಳಿ ವಿಭಾಗದ ಆರ್‌ಪಿಎಫ್ ‘ಮೇರಿ ಸಹೇಲಿ’ ಯೋಜನೆಯನ್ನು ಪ್ರಾರಂಭಿಸಿದೆ.

ಹಬ್ಬದ ಋತುವಿನ ದೃಷ್ಟಿಯಿಂದ ವಿಶೇಷ ರೈಲು ಸೇವೆಗಳನ್ನು ನಡೆಸಲಾಗುತ್ತಿರುವುದರಿಂದ ಮತ್ತು ಮಹಿಳೆಯರ ರಕ್ಷಣೆಯ ನಿಟ್ಟಿನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಹುಬ್ಬಳ್ಳಿ ವಿಭಾಗದ 4 ಜೋಡಿ ರೈಲುಗಳಲ್ಲಿ ಈ 'ಮೇರಿ ಸಹೇಲಿ' ಯೋಜನೆಯನ್ನು ಪರಿಚಯಿಸಲಾಗಿದೆ.

ಅಂದರೆ,

*ಟಿ.ನಂ: 07305 / 02779-02780 / 07306 ಹುಬ್ಬಳ್ಳಿ / ವಾಸ್ಕೋ ಡಾ-ಗಾಮಾ-ಹಜರತ್ ನಿಯಾಮುದ್ದೀನ್- ಹುಬ್ಬಳ್ಳಿ / ವಾಸ್ಕೋ ಡಾ ಗಾಮಾ ಎಕ್ಸ್‌ಪ್ರೆಸ್ ವಿಶೇಷ‌ ರೈಲು,

*ಟಿ.ನಂ: 07317/07318 ಹುಬ್ಬಳ್ಳಿ-ಲೋಕಮಾನ್ಯ ತಿಲಕ್ ಟರ್ಮಿನಸ್-ಹುಬ್ಬಳ್ಳಿ ಎಕ್ಸ್‌ಪ್ರೆಸ್ ವಿಶೇಷ ರೈಲು,

*ಟಿ.ನಂ: 07225/07226 ಹುಬ್ಬಳ್ಳಿ-ವಿಜಯವಾಡ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ವಿಶೇಷ ರೈಲು,

*ಟಿ.ನಂ: 01140/01139 ಗದಗ್-ಮುಂಬೈ ಸಿಎಸ್‌ಎಂಟಿ- ಗದಗ್ ಎಕ್ಸ್‌ಪ್ರೆಸ್ ವಿಶೇಷ ರೈಲಿನಲ್ಲಿ 'ಮೇರಿ ಸಹೇಲಿ’ ಯನ್ನು ಆರಂಭಿಸಲಾಗಿದೆ.

ಸ್ತ್ರೀ ರಕ್ಷಣೆಗಾಗಿ ''ಮೇರಿ ಸಹೇಲಿ''

ಈ ಯೋಜನೆಯಡಿಯಲ್ಲಿ ಆರಂಭಿಕ ನಿಲ್ದಾಣಗಳಲ್ಲಿ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಮತ್ತು ಲೇಡಿ ಕಾನ್ಸ್​​​ಟೇಬಲ್‌ಗಳ ತಂಡವನ್ನು ರಚಿಸಲಾಗಿದೆ. ರೈಲುಗಳು ಪ್ರಾರಂಭವಾಗುವ ಮೊದಲು, ಈ ತಂಡವು ಎಲ್ಲಾ ಪ್ರಯಾಣಿಕರ ಬೋಗಿಗಳನ್ನು ಪ್ರವೇಶಿಸುತ್ತದೆ ಮತ್ತು ಮಹಿಳಾ ಪ್ರಯಾಣಿಕರನ್ನು ಅದರಲ್ಲೂ ವಿಶೇಷವಾಗಿ ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರನ್ನು ಗುರುತಿಸಿ ವಿಚಾರಿಸಿಕೊಳ್ಳುತ್ತದೆ. ಈ ತಂಡವು ಮಹಿಳಾ ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಸುತ್ತದೆ ಮತ್ತು ಪ್ರಯಾಣದ ಸಮಯದಲ್ಲಿ ಯಾವುದೇ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅವರು ಎದುರಿಸಿದರೆ ಅಥವಾ ನೋಡಿದರೆ 182 ಭದ್ರತಾ ಸಹಾಯ ಮಾರ್ಗವನ್ನು ಸಂಪರ್ಕಿಸಬಹುದು ಎಂದು ತಿಳಿಸುತ್ತದೆ.

ಹುಬ್ಬಳ್ಳಿ ವಿಭಾಗಕ್ಕೆ mysaheliubl@gmail.com ಎಂದು ಇಮೇಲ್ ಐಡಿ ರಚಿಸಲಾಗಿದೆ ಮತ್ತು ಭದ್ರತಾ ಸಹಾಯಕ್ಕಾಗಿ 7022626987 ಮೊಬೈಲ್ ಸಂಖ್ಯೆಗೆ ಸಂಪರ್ಕಿಸುವಂತೆ ಮನವಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.