ETV Bharat / state

ಅಳ್ನಾವರ: ಸ್ತಬ್ಧಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯಾರಂಭಕ್ಕೆ ಕ್ರಮ - Darwada latest news

ಈ ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾದರೆ ಮಿಶನ್ ರಸ್ತೆ, ಪೊಲೀಸ್ ಕ್ವಾಟ್ರಸ್, ಚರ್ಚ್ ರಸ್ತೆ, ಎಂ.ಸಿ. ಪ್ಲಾಟ್ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ದೊರೆಯಲಿದೆ.

Drinking water unit
Drinking water unit
author img

By

Published : Jul 4, 2020, 11:48 PM IST

ಅಳ್ನಾವರ: ಪಟ್ಟಣದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ (ಕಾರ್ಯ) ಆರಂಭಿಸಲು ಕ್ರಮ ಜರುಗಿಸಲಾಗುವದು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ ತಿಳಿಸಿದ್ದಾರೆ.

ಎಪಿಎಂಸಿ ಆಧೀನದಲ್ಲಿನ ಈ ಘಟಕ ಕಾರ್ಯಾರಂಭ ಮಾಡದೆ ಸ್ತಬ್ಧವಾಗಿದೆ. ಧಾರವಾಡ ಎಪಿಎಂಸಿ ಅವರ ಸಹಕಾರದಿಂದ ಈ ಘಟಕವನ್ನು ಪಟ್ಟಣ ಪಂಚಾಯತ್ ಗೆ ಹಸ್ತಾಂತರ ಮಾಡಿಕೊಂಡು ನಿರ್ವಹಣೆ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು ಈಗಾಗಲೇ ಎಪಿಎಂಸಿ ಜೊತೆ ಮಾತುಕತೆ ಯಶಸ್ವಿಯಾಗಿದೆ ಎಂದರು.

ಈ ಘಟಕ ಆರಂಭವಾದರೆ ಮಿಶನ್ ರಸ್ತೆ, ಪೊಲೀಸ್ ಕ್ವಾಟ್ರಸ್, ಚರ್ಚ್ ರಸ್ತೆ, ಎಂ.ಸಿ. ಪ್ಲಾಟ್ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ದೊರೆಯಲಿದೆ. ಒಂದು ರೂಪಾಯಿ ಕ್ವಾಯಿನ್ ಹಾಕಿ ನೀರು ಪಡೆಯಬಹುದು. ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೂ ಕೂಡ ನೀರು ದೊರಕಲಿದೆ ಎಂದು ಗದ್ದಿಗೌಡರ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.