ಹುಬ್ಬಳ್ಳಿ: ಲಾಕ್‌ಡೌನ್ ಮಧ್ಯೆ ಸಂತೆ ಮಾಡಲು ಮುಂದಾದ ತರಕಾರಿ ಮಾರಾಟಗಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ಕುಂದಗೋಳ ತಾಲೂಕಿನ ಸಂಶಿಯಲ್ಲಿ ನಡೆದಿದೆ.
ವ್ಯಾಪಾರಿಗಳು ಲಾಕ್‌ಡೌನ್ ನಿರ್ಲಕ್ಷಿಸಿ ಬೆಳಗ್ಗೆ ತರಕಾರಿ ಸಂತೆ ಮಾಡಲು ಆಗಮಿಸಿದ್ದರು. ಈ ವೇಳೆ ಪೊಲೀಸರು ಲಾಠಿ ಏಟಿನ ರುಚಿ ತೋರಿಸಿದ್ದಾರೆ. ಪೊಲೀಸರ ಕೆಂಗಣ್ಣಿಗೆ ಗುರಿಯಾದ ವ್ಯಾಪಾರಸ್ಥರು ಹಾಗೂ ಗ್ರಾಹಕರು ದಿಕ್ಕಾಪಾಲಾಗಿ ಓಡಬೇಕಾಯ್ತು.
ಕಳೆದ ವಾರವೂ ಪೊಲೀಸರು ಇದೇ ರೀತಿ ಲಾಠಿ ರುಚಿತೋರಿಸಿದ್ದರು. ಆದ್ರೂ ಮತ್ತೆ ಇಂದು ಸಂತೆ ನಡೆಸಲು ವ್ಯಾಪಾರಿಗಳು ಮುಂದಾಗಿದ್ದರು.