ETV Bharat / state

ರಾಜಕಾರಣಿಗಳು ಕೀಳು ಮಟ್ಟದ ಟೀಕೆ ಮಾಡಬಾರದು: ಸಭಾಪತಿ ಹೊರಟ್ಟಿ

author img

By

Published : Oct 20, 2021, 3:11 PM IST

Updated : Oct 20, 2021, 3:26 PM IST

ಮೌಲ್ಯಾಧಾರಿತ ರಾಜಕಾರಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯ, ಇವತ್ತಿನ ರಾಜಕಾರಣದ ಬಗ್ಗೆ ಜನ ಬೈಯುತ್ತಿದ್ದಾರೆ. ಹೀಗಾಗಿ ರಾಜಕಾರಣಿಗಳು ಸರಿಪಡಿಸಿಕೊಳ್ಳಬೇಕು ಎಂದು ಬಸವರಾಜ ಹೊರಟ್ಟಿ ಮನವಿ ಮಾಡಿಕೊಂಡರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ

ಧಾರವಾಡ: ರಾಜಕಾರಣಿಗಳ ಮಧ್ಯೆ ಕೀಳು ಮಟ್ಟದ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದು, ಟೀಕೆ ಟಿಪ್ಪಣಿ ಯಾವುದೇ ಇರಲಿ ಇಂತಹ ಶಬ್ದಗಳನ್ನು ಬಳಸಬಾರದು. ಜನ ರಾಜಕಾರಣಿಗಳನ್ನು ನೋಡುತ್ತಿರುತ್ತಾರೆ ಎಂದು ಕಿವಿಮಾತು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ‌ಮಾತನಾಡಿದ ಅವರು, ರಾಜಕಾರಣಿಗಳು ಬಹಳ ಗೌರವದಿಂದ ನಡೆದುಕೊಳ್ಳಬೇಕು. ಇನ್ನೊಬ್ಬರಿಗೆ ಮಾದರಿಯಾಗಿ ಇರಬೇಕು. ಈಗ ಬಳಸುತ್ತಿರುವ ಶಬ್ದಗಳು ಯಾರಿಗೂ ಸರಿ ಅನಿಸಿಲ್ಲ, ಅವರವರ ವೈಯಕ್ತಿಕ ವಿಚಾರಗಳಿಗೆ ಹೋಗಬಾರದು ಇದು ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು.

ಮೌಲ್ಯಾಧಾರಿತ ರಾಜಕಾರಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯ, ಇವತ್ತಿನ ರಾಜಕಾರಣದ ಬಗ್ಗೆ ಜನ ಬೈಯುತ್ತಿದ್ದಾರೆ. ಹೀಗಾಗಿ ರಾಜಕಾರಣಿಗಳು ಸರಿಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಇಂಧನ ಬೆಲೆ ಏರಿಕೆಗೆ ಕೊರೊನಾ ಕಾರಣವೆಂದು ಸಚಿವ ಕತ್ತಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಓರ್ವ ಸಚಿವ ಹೇಳುವ ಮಾತು ಸರ್ಕಾರದ್ದೇ ಮಾತು ಇದ್ದಂತೆ ಆ ರೀತಿ ಹೇಳಬಾರದು. ಯಾವುದೇ ಮಂತ್ರಿಯಾಗಿರಲಿ ಜವಾಬ್ದಾರಿಯಿಂದ ಮಾತನಾಡಬೇಕು. ಮಂತ್ರಿ ಮಾತನಾಡುವುದಕ್ಕೂ ಜನ ಮಾತನಾಡುವುಕ್ಕೂ ವ್ಯತ್ಯಾಸ ಇದೆ ಎಂದರು.

Last Updated : Oct 20, 2021, 3:26 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.