ಧಾರವಾಡ: ಉದ್ಯಮಿಗಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಭೂಗತ ಪಾತಕಿ ಬಚ್ಚಾಖಾನ್ನನ್ನು ಧಾರವಾಡ ಜೆಎಂಎಫ್ಸಿ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಇಂದು ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆ ಉಪನಗರ ಪೊಲೀಸರು ಬಚ್ಚಾಖಾನ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಬಚ್ಚಾಖಾನ್ಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಧಾರವಾಡದ ಪ್ರಮುಖ ಉದ್ಯಮಿಗಳಿಗೆ ಮೈಸೂರು ಜೈಲಿನಲ್ಲಿದ್ದುಕೊಂಡು ಬೆದರಿಕೆ ಹಾಕಿದ್ದ ಆರೋಪದಲ್ಲಿ ಕಳೆದ ಕೆಲ ದಿನಗಳ ಹಿಂದೆ ಬಚ್ಚಾಖಾನ್ ಬಂಧಿಸಲಾಗಿತ್ತು. ನಾಳೆ ಬೆಳಗ್ಗೆ ಮೈಸೂರಿಗೆ ಕರೆದೊಯ್ಯುವ ಸಾಧ್ಯತೆಯಿದೆ.
ಇದನ್ನೂ ಓದಿ: ಉದ್ಯಮಿಗಳಿಗೆ ಬೆದರಿಕೆ ಆರೋಪ: ಪಾತಕಿ ಬಚ್ಚಾಖಾನ್ ಪೊಲೀಸ್ ವಶಕ್ಕೆ