ETV Bharat / state

ಸಿದ್ದರಾಮಯ್ಯ ಕ್ಷೇತ್ರ ಅದಲು ಬದಲು ವಿಚಾರ: ಜೋಶಿ, ಶೆಟ್ಟರ್, ಮುನೇನಕೊಪ್ಪ ಪ್ರತಿಕ್ರಿಯೆ ಹೀಗಿದೆ - ಕ್ಷೇತ್ರ ಅದಲು ಬದಲು ಮಾಡುವುದೇ ಸಿದ್ದರಾಮಯ್ಯ ರಾಜಕಾರಣ

ಸಿದ್ದರಾಮಯ್ಯ ಎಲ್ಲಿ ಹೋದ್ರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲ್ಲ. ಸಿದ್ದರಾಮಯ್ಯ ಅವರು ಪ್ರತಿ‌ ಸಲ ಅಬ್ಬೇಪಾರಿಯಂತೆ ಓಡಾಡ್ತಿದ್ದಾರೆ. ಈ ಸಲ ಕೋಲಾರಕ್ಕೆ ಹೋಗಿದ್ದಾರೆ. ನಾನು ಕೋಲಾರದವರಿಗೆ ಹೇಳ್ತೀನಿ, ಚಾಮುಂಡೇಶ್ವರಿಯಲ್ಲಿ ಏನ್ ಮಾಡಿದಾರೆ, ಬಾದಾಮಿಯಲ್ಲಿ ಏನ್ ಮಾಡಿದ್ದಾರೆ ಕೇಳಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

Union Minister Prahlad Joshi
ಜೋಶಿ, ಶೆಟ್ಟರ್, ಮುನೇನಕೊಪ್ಪ ಪ್ರತಿಕ್ರಿಯೆ ಹೀಗಿದೆ
author img

By

Published : Nov 13, 2022, 5:39 PM IST

ಹುಬ್ಬಳ್ಳಿ: ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೆಲಸ ಮಾಡಲಿಲ್ಲ. ಹಾಗಾಗಿ ಜನ ಸೋಲಿಸಿ ಮನೆಗೆ ಕಳುಸಿದ್ರು. ಬಾದಾಮಿಯಲ್ಲಿ ಏನ್ ಪುಣ್ಯ ಇತ್ತೋ ಏನೋ, ಆರಿಸಿ ಬಂದಿದ್ದಾರೆ. ದೊಡ್ಡ ನಾಯಕರಾಗಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಿ ಕೆಲಸ ಮಾಡಿದವರು ಅಲ್ಲಿ ಗೆದ್ರು. ಸಿದ್ದರಾಮಯ್ಯ ಎಲ್ಲಿ ಹೋದ್ರು ಜನರನ್ನು ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ‌ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಪ್ರತಿ‌ ಸಲ ಅಬ್ಬೇಪಾರಿಯಂತೆ ಓಡಾಡ್ತಿದ್ದಾರೆ. ಈ ಸಲ ಕೋಲಾರಕ್ಕೆ ಹೋಗಿದ್ದಾರೆ. ನಾನು ಕೋಲಾರದವರಿಗೆ ಹೇಳ್ತೀನಿ, ಚಾಮುಂಡೇಶ್ವರಿಯಲ್ಲಿ ಏನ್ ಮಾಡಿದಾರೆ, ಬಾದಾಮಿಯಲ್ಲಿ ಏನ್ ಮಾಡಿದ್ದಾರೆ ಕೇಳಿ. ಅವರನ್ನು ಸೋಲಿಸಿ ಮನೆಗೆ ಕಳುಹಿಸಿ ಎಂದು ಇವತ್ತೇ ನಾನು ಹೇಳ್ತೀನಿ. ಸಿದ್ದರಾಮಯ್ಯ ಇನ್ನು ಸ್ವಲ್ಪ ದಿನದಲ್ಲಿ ಯಾವ ಪಾರ್ಟಿಗೆ ಹೋಗ್ತಾರೆ ನೋಡೋಣ ಎಂದು ಕಾಲೆಳೆದರು.

ಸಿದ್ದರಾಮಯ್ಯ ಎಲ್ಲಾದ್ರೂ ನಿಲ್ಲಲಿ: ಕೋಲಾರದಲ್ಲಿ ಪಕ್ಷದ ಸ್ಥಿತಿ ಏನಿದೆ ಅನ್ನೋದನ್ನ ಅವರು ಅರ್ಥಮಾಡಿಕೊಳ್ಳಲಿ. ನಿಲ್ಲೋದಾದರೆ ಅಲ್ಲೇ ನಿಲ್ಲಲಿ, ಅದು ಅವರಿಗೆ ಬಿಟ್ಟಿದ್ದು. ಸಿದ್ದರಾಮಯ್ಯ ಬಾದಾಮಿಯಲ್ಲಿ 500, 1000 ವೋಟ್​ಗಳ ಅಂತರಿದಿಂದ ಆರಿಸಿ ಬಂದ್ರು. ಚಾಮುಂಡೇಶ್ವರಿಯಲ್ಲಿ ಜನ ಸಿದ್ದರಾಮಯ್ಯರನ್ನು ರಿಜೆಕ್ಟ್ ಮಾಡಿದ್ರು. ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆದ್ರೂ ಸೋತಂತೆ.‌ ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದವರಿಗೆ ಹೆದರಿಕೆ ಇದೆ ಅಂದ್ರೆ ಅವರ ವ್ಯಕ್ತಿತ್ವ ಅರ್ಥ ಆಗುತ್ತದೆ ಎಂದು ಜೋಶಿ ಟೀಕಿಸಿದರು.

ಜೋಶಿ, ಶೆಟ್ಟರ್, ಮುನೇನಕೊಪ್ಪ ಪ್ರತಿಕ್ರಿಯೆ ಹೀಗಿದೆ

ಸಿದ್ದರಾಮಯ್ಯ, ಖರ್ಗೆ, ಡಿ ಕೆ ಶಿವಕುಮಾರ್ ಮೂರು ಪವರ್ ಸೆಂಟರ್ ಆಗಿವೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಟಿಕೆಟ್​ಗಾಗಿ ಖರ್ಗೆ ಮನೆಗೆ ಹೋಗ್ತಿದ್ದಾರೆ. ಇದು ಮತ್ತೊಂದು ಪವರ್ ಸೆಂಟರ್​ನ ಮಹತ್ವ. ಪವರ್ ಸೆಂಟರ್​ಗಳಿಂದಲೇ ಕಾಂಗ್ರೆಸ್ ಅಧೋಗತಿಗೆ ಹೋಗುತ್ತದೆ. ಚುನಾವಣೆ ಬರೋ ಮುಂಚೆ ಸಿದ್ದರಾಮಯ್ಯ ಎಲ್ಲಿ ಚೇಂಜ್ ಮಾಡ್ತಾರೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಹೇಳಿದರು.

ಇದನ್ನೂ ಓದಿ: ವಿಶೇಷ ಚುನಾವಣಾ ಪ್ರಚಾರ ವಾಹನದಲ್ಲಿ ಕೋಲಾರಕ್ಕೆ ತೆರಳಿದ ಸಿದ್ದರಾಮಯ್ಯ

ಕ್ಷೇತ್ರ ಅದಲು ಬದಲು ಮಾಡುವುದೇ ಸಿದ್ದರಾಮಯ್ಯ ರಾಜಕಾರಣ: ಸಿದ್ದರಾಮಯ್ಯ ಕ್ಷೇತ್ರ ಅದಲು ಬದಲು ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮನೇನಕೊಪ್ಪ ಹೇಳಿದರು. ‌ರಾಜಕಾರಣದಲ್ಲಿ ಒಂದು ಕ್ಷೇತ್ರ ಗಟ್ಟಿಯಾಗಿ ಇಟ್ಕೊಂಡು, ಜನರ ಮನಸ್ಸು ಗೆದ್ದು ನಾಯಕರಾಗಬೇಕು. ಸಿದ್ದರಾಮಯ್ಯ ಅನೇಕ ಕ್ಷೇತ್ರಗಳನ್ನು ಬದಲಾವಣೆ ಮಾಡಿದ್ದಾರೆ. ಇದೀಗ ಅದನ್ನು ಮುಂದುವರೆಸಿದ್ದಾರೆ. ಸಿದ್ದರಾಮಯ್ಯ ಹಿರಿಯ ನಾಯಕರು, ನಾನು ಅವರ ಬಗ್ಗೆ ಮಾತನಾಡಲ್ಲ. ಸಿದ್ದರಾಮಯ್ಯನವರ ನಾಮಿನೇಷನ್ ಅಧಿಕೃತ ಆದ ಮೇಲೆ ಮಾತನಾಡೋಣ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.