ETV Bharat / state

ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಪ್ರಾಮಾಣಿಕವಾಗಿ ನಡೆಯುತ್ತಿದೆಯೇ? - appointment of Chancellor of Universities

ರಾಜ್ಯದಲ್ಲಿ 15-20 ವಿಶ್ವವಿದ್ಯಾಲಯಗಳಿವೆ. ಅಲ್ಲಿ ಉತ್ತಮ ಪ್ರೊಫೆಸರ್ ಹಾಗೂ ಅಕಾಡೆಮಿಯನ್ಸ್ ಇರುತ್ತಾರೆ. ಅರ್ಹತೆ ಆಧಾರದ ಮೇಲೆ ಕುಲಪತಿಗಳ ಆಯ್ಕೆ ನಡೆಯಬೇಕು. ಆದ್ರೆ, ಇಂದಿನ ಆಯ್ಕೆ ಹಣಬಲ, ರಾಜಕೀಯ, ಜಾತಿ ಹೆಸರಿನಲ್ಲಿ ಆಯ್ಕೆಯಾಗುತ್ತಿವೆ..

Is the appointment of Chancellor of Universities going systematic manner ?
ವಿಶ್ವವಿದ್ಯಾಲಯಗಳ ಕುಲಪತಿ ನೇಮಕ ಪ್ರಾಣಿಕವಾಗಿ ನಡೆಯುತ್ತಿದೆಯೇ?
author img

By

Published : Mar 16, 2021, 2:04 PM IST

ಧಾರವಾಡ : ವಿಶ್ವವಿದ್ಯಾಲಯದ ನಾಯಕರೆಂದೇ ಗುರುತಿಸಿಕೊಳ್ಳುವ ಕುಲಪತಿ ಅವರ ಸ್ಥಾನ ಗೌರವಾನ್ವಿತ ಹುದ್ದೆ. ಅವರ ಪಾತ್ರ ಬಹಳ ಮಹತ್ವದ್ದಾಗಿರುತ್ತೆ. ಸಾಮಾನ್ಯವಾಗಿ ವಿಶ್ವವಿದ್ಯಾಲಯದ ಕಾರ್ಯ ನಿರ್ವಾಹಕ ಅಥವಾ ಔಪಚಾರಿಕ ಮುಖ್ಯಸ್ಥರಾಗಿರುತ್ತಾರೆ. ಅವರ ಕಾರ್ಯ ವೈಖರಿಯ ಮೇಲೆ ವಿವಿಗಳ ಅಭಿವೃದ್ಧಿ ನಿರ್ಧಾರವಾಗುತ್ತವೆ. ಆದ್ರೆ, ಅವರ ನೇಮಕ ಪ್ರಾಮಾಣಿಕವಾಗಿ ನಡೆಯುತ್ತಾ ಎಂಬುದು ಇದೀಗ ಯಕ್ಷ ಪ್ರಶ್ನೆ.

ರಾಜ್ಯದಲ್ಲಿ ಹಲವು ವಿಶ್ವವಿದ್ಯಾಲಯಗಳಿವೆ. ಅಲ್ಲಿ ಒಬ್ಬರು ಕುಲಪತಿಗಳು ಬೇಕೆ ಬೇಕು. ಇಂದಿನ ಕುಲಪತಿಗಳ ಆಯ್ಕೆ ಪ್ರಕ್ರಿಯೆ ರಾಜಕೀಯ, ಜಾತಿ ವ್ಯವಸ್ಥೆ, ಹಣಬಲದ ಮೇಲೆ ನಿಂತಿದೆ ಎಂಬುದು ಕೆಲವರ ಆರೋಪ.

ವಿಶ್ವವಿದ್ಯಾಲಯಗಳ ಕುಲಪತಿ ನೇಮಕ ಕುರಿತು ಪ್ರತಿಕ್ರಿಯೆ

ಈ ವಿಷಯಕ್ಕೆ ಸಂಬಂಧಿಸಿದಂತೆ ಹಿರಿಯ ಹಾಗೂ ಮಾಜಿ‌ ಸಿಂಡಿಕೇಟ್ ಸದಸ್ಯ ಜಯಂತ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ಕುಲಪತಿಗಳ ಆಯ್ಕೆಗೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳಿರುವುದು ಸಾಮಾನ್ಯವಾಗಿದೆ. ಸರ್ಚ್ ಕಮಿಟಿ ಮೆಂಬರ್​​ಗಳು ಕುಲಪತಿಗಳಾಗಿರುವುದು ಕಾಂಟ್ರೋವರ್ಸಿಯಾಗಿದೆ. ಸರ್ಚ್ ಕಮಿಟಿ ಮಾಡುವುದರಿಂದ ಉತ್ತಮ ಕುಲಪತಿ ನೇಮಕ ಮಾಡಲು ಸಾಧ್ಯವಾಗಲ್ಲ ಎಂಬುದು ಅವರ ವಾದ.

ರಾಜ್ಯದಲ್ಲಿ 15-20 ವಿಶ್ವವಿದ್ಯಾಲಯಗಳಿವೆ. ಅಲ್ಲಿ ಉತ್ತಮ ಪ್ರೊಫೆಸರ್ ಹಾಗೂ ಅಕಾಡೆಮಿಯನ್ಸ್ ಇರುತ್ತಾರೆ. ಅರ್ಹತೆ ಆಧಾರದ ಮೇಲೆ ಕುಲಪತಿಗಳ ಆಯ್ಕೆ ನಡೆಯಬೇಕು. ಆದ್ರೆ, ಇಂದಿನ ಆಯ್ಕೆ ಹಣಬಲ, ರಾಜಕೀಯ, ಜಾತಿ ಹೆಸರಿನಲ್ಲಿ ಆಯ್ಕೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮುನ್ನೆಚ್ಚರಿಕೆ ಪಾಲಿಸದಿದ್ದರೆ ಕಠಿಣ ನಿಯಮ ಅನಿವಾರ್ಯ: ಸಚಿವ ಡಾ.ಕೆ.ಸುಧಾಕರ್

ಅವರಿಗೆ ಅರ್ಹತೆ‌ ಇದೆಯೋ ಇಲ್ಲವೋ ಎಂಬುದನ್ನು ಮರೆತು ಅವರ ವೈಯಕ್ತಿಕ ವರ್ಚಸ್ಸಿನ ಮೇಲೆ ಕುಲಪತಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ಒಂದು ಕಡೆ ಸರ್ಕಾರ ಕಾರಣವಾದ್ರೆ, ಸಮಾಜ ಕೂಡ ಇದರ ಹೊಣೆಗಾರಿಕೆ ಹೊರ ಬೇಕಾಗುತ್ತದೆ.

ಈ ರೀತಿ ವ್ಯವಸ್ಥೆ ಸರಿಪಡಿಸದಿದ್ರೆ ವಿವಿ ಕುಲಪತಿ ಆಯ್ಕೆ ಸರಿಯಾಗಲ್ಲ. ಆಯ್ಕೆ ಸರಿಯಾಗಿ ಆಗದಿದ್ರೆ ವಿಶ್ವವಿದ್ಯಾಲಯಗಳು ಸರಿಯಾಗಿ ಬೆಳವಣಿಗೆ ಹೊಂದದೆ ಅಲ್ಲಿನ ಅಭಿವೃದ್ಧಿ ಕುಂಠಿತವಾಗುತ್ತದೆ. ಒಂದು ಪ್ರಮಾಣಿಕ ವ್ಯವಸ್ಥೆಯಲ್ಲಿ ಸರ್ಕಾರ ಕುಲಪತಿಗಳ ನೇಮಕ ಮಾಡಬೇಕು ಎಂದು ಜಯಂತ್ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.