ETV Bharat / state

ಇಂಟರ್​ನೆಟ್ ಸಮಸ್ಯೆ... ಅನ್ನಭಾಗ್ಯ ಅಕ್ಕಿ ಪಡೆಯಲು ಜನರ ಪರದಾಟ - undefined

ಹುಬ್ಬಳ್ಳಿಯ ಕುಸುಗಲ್​ ಗ್ರಾಮದಲ್ಲಿ ಜನರು ಸರ್ಕಾರ ನೀಡುವ ಅಕ್ಕಿಯನ್ನು ಪಡೆಯಲು ತಮ್ಮ ನಿತ್ಯದ ಕೆಲಸಗಳನ್ನು ಬಿಟ್ಟು ದಿನ ಪೂರ್ತಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂಟರ್​ನೆಟ್ ಸಮಸ್ಯೆಯಿಂದ ದಿನಪೂರ್ತಿ ಕಾದರೂ ಕೂಡ ಅಕ್ಕಿ ದೊರೆಯುತ್ತದೆ ಎಂಬ ನಂಬಿಕೆ ಇಲ್ಲ.

ಅನ್ನಭಾಗ್ಯ ಅಕ್ಕಿ ಪಡೆಯಲು ಜನರ ಪರದಾಟ
author img

By

Published : Mar 25, 2019, 12:03 AM IST

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಜನರು ಕೆಲಸ ಇಲ್ಲದೇ ಗುಳೆ ಹೋಗುತ್ತಿದ್ದಾರೆ. ಹೀಗಿರುವಾಗ ಜನರಿಗೆ ಆಧಾರವಾಗಿದ್ದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆಯಲೂ ಕೂಡ ಜನ ಪರದಾಡುವಂತಾಗಿದೆ.

ಹೌದು, ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಜನರು ಸರ್ಕಾರ ನೀಡುವ ಅಕ್ಕಿಯನ್ನು ಪಡೆಯಲು ತಮ್ಮ ನಿತ್ಯದ ಕೆಲಸಗಳನ್ನು ಬಿಟ್ಟು ದಿನ ಪೂರ್ತಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಮೊದಲೇ ಬರಗಾಲದಿಂದ ಕಂಗೆಟ್ಟ ಜನರು ಸರಿಯಾಗಿ ಕೆಲಸ ಕಾರ್ಯಗಳು ಸಿಗದೇ, ಕೆಲಸಗಳಿಗೆ ಪರಿತಪಿಸುತ್ತಿದ್ದಾರೆ. ಇಂತಹ ಜನರಿಗೆ ಜೀವನಕ್ಕೆ ಆಧಾರವಾಗಿದ್ದ ಅನ್ನಭಾಗ್ಯದ ಅಕ್ಕಿಯೂ ಸಹಿತ ಸರಿಯಾದ ಸಮಯಕ್ಕೆ ದೊರೆಯದೇ ಜನರು ಹೊಟ್ಟೆಗೆ ಹಿಟ್ಟಿಲ್ಲದೇ ಬದುಕುವಂತಾಗಿದೆ.

ಅನ್ನಭಾಗ್ಯ ಅಕ್ಕಿ ಪಡೆಯಲು ಜನರ ಪರದಾಟ

ಅನ್ನಭಾಗ್ಯ ಅಕ್ಕಿ ಪಡೆಯಬೇಕೆಂದರೆ ಕಂಪ್ಯೂಟರ್​​​ಗಳ ಮೂಲಕ ರಸೀದಿ ಪಡೆದು ಅಕ್ಕಿಯನ್ನು ಪಡೆಯಬೇಕೆಂಬ ನಿಯಮವಿದೆ. ಅದಕ್ಕಾಗಿ ಜನರು ಸೊಸೈಟಿಗಳ ಮುಂದೆ ಬೆಳಗ್ಗೆಯೇ ಬಂದು ಕ್ಯೂ ನಿಂತರೂ ಕೂಡ ಈ ಕಂಪ್ಯೂಟರ್ ಗಳಿಂದ ರಸೀದಿ ಪಡೆಯುವದು ಮಾತ್ರ ಹಲವಾರು ಸಮಯ ಕಾದ ನಂತರವೇ. ಅಕ್ಕಿ ಪಡೆಯಲು ಕಂಪ್ಯೂಟರ್​ನಲ್ಲಿ ರೇಷನ್ ಕಾರ್ಡ್ ಎಂಟ್ರಿ ಮಾಡಿ ರಸೀದಿ ನೀಡಲಾಗುತ್ತದೆ. ಆದರೆ, ಇದಕ್ಕೆ ಇಂಟರ್​ನೆಟ್ ಸಮಸ್ಯೆ ಇರುವುದರಿಂದ ಜನರು ದಿನಪೂರ್ತಿ ನಿಂತು ಅಕ್ಕಿ ಪಡೆಯುವಂತಾಗಿದೆ.

ಇಂಟರ್​ನೆಟ್​​ ಸಮಸ್ಯೆ:

ಒಂದೊಂದು ಬಾರಿ ಇಂಟರ್​ನೆಟ್ ಸಮಸ್ಯೆಯಿಂದ ದಿನಪೂರ್ತಿ ಕಾದರೂ ಕೂಡ ಅಕ್ಕಿ ದೊರೆಯುತ್ತದೆ ಎಂಬ ನಂಬಿಕೆ ಇಲ್ಲ. ಇದರಿಂದಾಗಿ ಮತ್ತೆ ಬೆಳಗ್ಗೆ ಬಂದು ನಿಲ್ಲಬೇಕಾಗುತ್ತದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇಂತಹ ಸಮಸ್ಯೆಗಳತ್ತ ಗಮನ ಹರಿಸಿ ಬಡ ಜನತೆಗೆ ಅನುಕೂಲತೆ ಕಲ್ಪಿಸಬೇಕಿದೆ.

Intro:Body:

ಹುಬ್ಬಳ್ಳಿ 01 (25-03-19) 

ಹುಬ್ಬಳ್ಳಿ : ಉತ್ತರ ಕರ್ನಾಟಕದ ಭಾಗದಲ್ಲಿ ಸೂರ್ಯ ತನ್ನ ಪ್ರಕಾಶವನ್ನು ಇತ್ತಿಚೆಗೆ ಹೆಚ್ಚು ಮಾಡಿದ್ದು, ಜನರು ಕೆಲಸ ಕಾರ್ಯಗಳು ಇಲ್ಲದೇ ಗುಳೇ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಗಳಲ್ಲಿ ಜನರಿಗೆ ಆಧಾರವಾಗಿದ್ದ ಅಣ್ಣ ಭಾಗ್ಯ ಯೋಜನೆಯಡಿ ದೊರೆಯುವ ಅಕ್ಕಿಯನ್ನು ಪಡೆದು ಜೀವನ ನಡೆಸುತ್ತಿದ್ದರು. ಆದರೆ ಅಕ್ಕಿ ಪಡೆಯಲು ಇದೀಗ ಜನರು ದಿನಪೂರ್ತಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.ಹೌದು, ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಜನರು ಸರಕಾರ ನೀಡುವ ಅಕ್ಕಿಯನ್ನು ಪಡೆಯಲು ತಮ್ಮ ನಿತ್ಯದ ಕೆಲಸಗಳನ್ನು ಬಿಟ್ಟು ದಿನ ಪೂರ್ತಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಮೊದಲೇ ಬರಗಾಲದಿಂದ ಕಂಗೆಂಟ ಜನರು ಸರಿಯಾಗಿ ಕೆಲಸ ಕಾರ್ಯಗಳು ಸಿಗದೇ, ಕೆಲಸಗಳಿಗೆ ಪರಿತಪ್ಪಿಸುತ್ತಿದ್ದಾರೆ. ಇಂತಹ ಜನರಿಗೆ ಜೀವನಕ್ಕೆ ಆಧಾರವಾಗಿದ್ದ ಅನ್ನಭಾಗ್ಯದ ಅಕ್ಕಿಯೂ ಸಹಿತ ಸರಿಯಾದ ಸಮಯಕ್ಕೆ ದೊರೆಯದೇ ಜನರು ಹೊಟ್ಟೆಗೆ ಹಿಟ್ಟಿಲ್ಲದೇ ಬದುಕುವಂತಾಗಿದೆ. ಅನ್ನಭಾಗ್ಯ ಅಕ್ಕಿ ಪಡೆಯಬೇಕೆಂದರೆ ಕಂಪ್ಯೂಟರ್ ಗಳ ಮೂಲಕ ರಸೀದಿ ಪಡೆದು ಅಕ್ಕಿಯನ್ನು ಪಡೆಯಬೇಕೆಂಬ ನಿಯಮವಿದೆ. ಅದಕ್ಕಾಗಿ ಜನರು ಸೊಸೈಟಿಗಳ ಮುಂದೆ ಬೆಳಿಗ್ಗೆಯೇ ಬಂದು ಕ್ಯೂ ನಿಂತರೂ ಕೂಡಾ ಈ ಕಂಪ್ಯೂಟರ್ ಗಳಿಂದ ರಸೀದಿ ಪಡೆಯುವದು ಮಾತ್ರ ಹಲವಾರು ಸಮಯ ಕಾದ ನಂತರವೇ.ಅಕ್ಕಿ ಪಡೆಯಲು ಕಂಪ್ಯೂಟರ್ ನಲ್ಲಿ ರೇಷನ್ ಕಾರ್ಡ್ ಎಂಟರಿ ಮಾಡಿ ರಸೀದಿ ನೀಡಲಾಗುವುದು. ಆದರೆ, ಇದಕ್ಕೆ ಅಂತರಜಾಲ ಸಂಪರ್ಕ ಬೇಕಾಗುವದರಿಂದ ಅಂತರಜಾಲ ಸಮಸ್ಯೆಗಳಿಂದ ಜನರು ದಿನಪೂರ್ತಿ ನಿಂತು ಅಕ್ಕಿ ಪಡೆಯುವಂತಾಗಿದೆ. ಇದರಿಂದ ಯಾವಾಗ ಈ ಸರ್ವರ್ (ಅಂತರಜಾಲ) ಸಮಸ್ಯೆ ಬಗೆಹರಿಯುತ್ತದೆಯೋ ಎಂದು ಪ್ರಶ್ನಿಸುತ್ತಾರೆ. ಒಂದೊಂದು ಬಾರಿ ಕಂಪ್ಯೂಟರ್ ಸರ್ವರ್ ನಿಂದ ದಿನಪೂರ್ತಿ ಕಾದರು ಕೂಡಾ ಅಕ್ಕಿ ದೊರೆಯುವದು ಎಂಬ ನಂಬಿಕೆ ಇಲ್ಲ. ಇದರಿಂದಾಗಿ ಮತ್ತೆ ನಾಳೆ ಬೆಳಿಗ್ಗೆ ಬಂದು ನಿಲ್ಲಬೇಕಾಗುವುದು ಎಂದು ಜನರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುವರು. ಇದು ಈ ಗ್ರಾಮದ ಸಮಸ್ಯೆ ಅಷ್ಟೇ ಅಲ್ಲದೇ ತಾಲೂಕಿನ ಎಲ್ಲ ಗ್ರಾಮದ ಸೊಸೈಟಿಗಳ ಸ್ಥಿತಿಯೂ ಇದಕ್ಕಿಂತ ಭಿನ್ನವೆನಿಲ್ಲಾ  ಸರಕಾರ ಅನ್ನಭಾಗ್ಯದಿಂದ ಬಡಜನರ ಹೊಟ್ಟೆ ತುಂಬಿಸಲು ಯೋಜನೆ ರೂಪಿಸಿದರೆ, ಆ ಯೋಜನೆ ಪಡೆಯಲು ಜನರು ಕಷ್ಟಪಡುವಂತಾಗಿದೆ. ಇದರಿಂದ ಸರಕಾರ ಕೊಡುವ ಅಕ್ಕಿ ಸರಿಯಾದ ಸಮಯಕ್ಕೆ ಜನರಿಗೆ ಮುಟ್ಟದೇ ಹೋಗುತ್ತಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇಂತಹ ಸಮಸ್ಯೆಗಳತ್ತ ಗಮನ ಹರಿಸಿ ಬಡಜನರ ಸಮಸ್ಯೆ ಪರಿಹಾರ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕು.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.