ETV Bharat / state

ಪಶ್ಚಿಮ ಶಿಕ್ಷಕರ ಚುನಾವಣೆ ಕುಲಗೆಟ್ಟ ಮತಗಳಲ್ಲಿ ಏರಿಕೆ

ಈ ಬಾರಿಯ ಚುನಾವಣೆಯಲ್ಲೇ ಅಧಿಕ ಮತಗಳು ಕುಲಗೆಟ್ಟಿವೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ್ರೆ ಹಲವು ಅನುಮಾನ ಮೂಡಿವೆ. ಶಿಕ್ಷಕರ ಶಿಕ್ಷಣದ ಗುಣಮಟ್ಟದ ಬಗ್ಗೆ ಅನುಮಾನ ಪಡುವ ವಾತಾವರಣ ನಿರ್ಮಾಣವಾಗಿದೆ..

author img

By

Published : Jun 15, 2022, 3:43 PM IST

ಪಶ್ಚಿಮ ಶಿಕ್ಷಕರ ಚುನಾವಣೆ ಕುಲಗೆಟ್ಟ ಮತಗಳಲ್ಲಿ ಏರಿಕೆ
ಪಶ್ಚಿಮ ಶಿಕ್ಷಕರ ಚುನಾವಣೆ ಕುಲಗೆಟ್ಟ ಮತಗಳಲ್ಲಿ ಏರಿಕೆ

ಹುಬ್ಬಳ್ಳಿ : ಪಶ್ಚಿಮ ಶಿಕ್ಷಕರ ಚುನಾವಣೆಯಲ್ಲಿ ಕುಲಗೆಟ್ಟ ಮತಗಳಲ್ಲಿ ಏರಿಕೆಯಾಗಿವೆ. ಶಿಕ್ಷಕರ ಶಿಕ್ಷಣದ ಗುಣಮಟ್ಟದ ಬಗ್ಗೆ ಅನುಮಾನಗಳು ಹೆಚ್ಚಾಗುವಂತೆ ಮಾಡಿವೆ. ಈ ಮೂಲಕ ಮಕ್ಕಳನ್ನು ತಿದ್ದಿ ಬುದ್ದಿವಂತರನ್ನಾಗಿ ಮಾಡುವ ಶಿಕ್ಷಕರೇ ಅವಿದ್ಯಾವಂತರಾದ್ರಾ ಎನ್ನುವಂತೆ ಮಾಡಿದೆ.

ಮತ ಹೀಗೆ ಚಲಾಯಿಸಬೇಕು ಅಂತಾ ತಿಳಿ ಹೇಳಿದ್ರೂ ಅದನ್ನ ಬದಿಗೊತ್ತಿ ತಮಗೆ ತಿಳಿದ ರೀತಿಯಲ್ಲೇ ಶಿಕ್ಷಕರು ಮತ ಚಲಾವಣೆ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಬರೋಬ್ಬರಿ 1,223 ಮತಗಳು ಕುಲಗೆಟ್ಟಿವೆ. ಕಳೆದ 7 ಅವಧಿಯಲ್ಲಿ ಅಂದ್ರೆ 42 ವರ್ಷದ ಇತಿಹಾಸದಲ್ಲೇ ಈ ಬಾರಿಯೇ ಅತೀ ಹೆಚ್ಚು ಮತಗಳು ಕುಲಗೆಟ್ಟಿವೆ.

1980ರಲ್ಲಿ 175, 1986ರಲ್ಲಿ 205, 1992ರಲ್ಲಿ 380, 1998ರಲ್ಲಿ 571, 2004ರಲ್ಲಿ 537, 2016ರಲ್ಲಿ 784 ಮತಗಳು ಕುಲಗೆಟ್ಟಿದ್ದವು. ಈ ಬಾರಿಯ ಚುನಾವಣೆಯಲ್ಲೇ ಅಧಿಕ ಮತಗಳು ಕುಲಗೆಟ್ಟಿವೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ್ರೆ ಹಲವು ಅನುಮಾನ ಮೂಡಿವೆ. ಶಿಕ್ಷಕರ ಶಿಕ್ಷಣದ ಗುಣಮಟ್ಟದ ಬಗ್ಗೆ ಅನುಮಾನ ಪಡುವ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ಅನುದಾನಿತ ಶಾಲೆಯ ವೇತನ ಬಿಡುಗಡೆಗೆ ಲಂಚ: ಎಸಿಬಿ ಬಲೆಗೆ ಬಿದ್ದ ಅಫ್ಜಲಪುರ ಬಿಇಒ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.