ಹುಬ್ಬಳ್ಳಿ: ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯ ಪ್ರಯಾಣಿಕರ ಸೇವೆಯಲ್ಲಿ ಮಾತ್ರವಲ್ಲದೇ ಸರಕು ಸಾಗಣೆಯಲ್ಲಿಯೂ ಕೂಡ ಹೊಸ ದಾಖಲೆ ಮಾಡಿದೆ. ಸರಕು ಸಾಗಣೆಯಲ್ಲಿ ಹುಬ್ಬಳ್ಳಿ ರೈಲ್ವೆ ವಿಭಾಗವು ಈ ವರ್ಷ 2,500 ಕೋಟಿ ರೂ. ಆದಾಯಗಳಿಸಿದೆ. ಜೊತೆಗೆ, ಒಂದು ವರ್ಷದಲ್ಲಿ 84 ಕಿ.ಮೀ ಜೋಡಿ ರೈಲು ಮಾರ್ಗ ಪೂರ್ಣಗೊಳಿಸಲಾಗಿದೆ.
36ನೇ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸಭೆಯಲ್ಲಿ ಮಹತ್ವದ ಮಾಹಿತಿ ನೀಡಿದ್ದು, ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಪ್ರಯಾಣಿಕ ಸೌಲಭ್ಯಗಳ ಸುಧಾರಣೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಈ ಸಭೆಯಲ್ಲಿ ನಡೆಯುವ ಚರ್ಚೆ ಮತ್ತಷ್ಟು ಉತ್ತಮ ಸೌಲಭ್ಯ ಮತ್ತು ಸುಧಾರಿತ ಸೇವೆಯನ್ನು ಒದಗಿಸುವ ರೈಲ್ವೆಯ ಪ್ರಯತ್ನಕ್ಕೆ ಸಹಾಯ ಮಾಡಲಿದೆ. ಈ ನಿಟ್ಟಿನಲ್ಲಿ ವ್ಯವಸ್ಥಿತ ಸೇವೆಯ ಮೂಲಕ ನೈಋತ್ಯ ರೈಲ್ವೆ ಇಂತಹದೊಂದು ಸಾಧನೆ ಮಾಡಿರುವುದು ವಿಶೇಷವಾಗಿದೆ.
ರೈಲ್ವೆ ಒದಗಿಸುತ್ತಿರುವ ಸೇವೆ ಮತ್ತು ಸುಧಾರಣೆಗಳ ಬಗ್ಗೆ ರೈಲ್ವೆ ಆಡಳಿತ ಮತ್ತು ರೈಲ್ವೆ, ಬಳಕೆದಾರರ ನಡುವೆ ಸಲಹೆ, ಸಮಾಲೋಚನೆಗೆ ವೇದಿಕೆಯನ್ನು ಒದಗಿಸಲು ರೈಲ್ವೆ ವಿಭಾಗಗಳಲ್ಲಿ ಡಿ.ಆರ್.ಯು.ಸಿ.ಸಿ.ಗಳನ್ನು ರಚಿಸಲಾಗಿದೆ. ಮೂಲಭೂತ ಸೌಕರ್ಯ ಕಾಮಗಾರಿಗಳು, ಪ್ರಯಾಣಿಕ ಸೌಲಭ್ಯಗಳು, ರೈಲುಗಳ ನಿಲುಗಡೆ, ರೈಲುಗಳ ವಿಸ್ತರಣೆ ಇತ್ಯಾದಿ ವಿಷಯಗಳ ಕುರಿತು ಚರ್ಚಿಸಿದ್ದು, ಮತ್ತಷ್ಟು ಅಭಿವೃದ್ಧಿ ಕಾರ್ಯಗಳ ಮೂಲಕ ನೈಋತ್ಯ ರೈಲ್ವೆ ವಿನೂತನ ಸೇವೆಯಿಂದ ಹೊರಹೊಮ್ಮಿದೆ.
ಇದನ್ನೂ ಓದಿ: ಮನೆ ಹಾನಿ ಪರಿಹಾರದಲ್ಲಿ ಸರ್ಕಾರ ತಾರತಮ್ಯ ಮಾಡಿದೆ: ಬಸವರಾಜ ಕೊರವರ