ಹುಬ್ಬಳ್ಳಿ: ಜಾಗತಿಕ ಪಿಡುಗಿನ ಪ್ರತಿಕೂಲ ಪರಿಸ್ಥಿತಿ ಮಧ್ಯೆಯೂ ಹುಬ್ಬಳ್ಳಿ ರೈಲ್ವೆ ವಿಭಾಗವು ಇದೇ ಸೆಪ್ಟೆಂಬರ್ ಅಂತ್ಯಕ್ಕೆ ಪಾರ್ಸಲ್ ಸಾಗಣೆಯಲ್ಲಿ ಒಟ್ಟು 2.06 ಕೋಟಿ ಆದಾಯ ಗಳಿಸಿದೆ.
ಅಕ್ಟೋಬರ್ ಮೊದಲ ವಾರದಲ್ಲಿ ವೇಳಾಪಟ್ಟಿಗೆ ಅನುಸಾರವಾಗಿ ಸಂಚರಿಸುವ ಪಾರ್ಸಲ್ ಎಕ್ಸ್‌ಪ್ರೆಸ್‌ಗಳಲ್ಲಿ ಒಟ್ಟು 1,786 ಕ್ವಿಂಟಾಲ್ ಸರಕನ್ನು ಗುವಾಹಟಿ ಮತ್ತು ಸಾಂಕರಾಯಿಲ್(ಕೋಲ್ಕತ್ತಾ) ಗೂಡ್ಸ್ ಟರ್ಮಿನಲ್ ಗಳಿಗೆ ಸಾಗಿಸಲಾಗಿದೆ. ಈ ಪಾರ್ಸಲ್ ವಿಶೇಷ ರೈಲುಗಳಲ್ಲಿ ನೆಸ್ಲೆ ಉತ್ಪನ್ನಗಳು, ಔಷಧಗಳು, ಶೈತ್ಯೀಕರಿಸಿದ ಮೀನುಗಳು ಮತ್ತು ಇತರ ಕೈಗಾರಿಕಾ ಸರಕುಗಳನ್ನು ಸಾಗಿಸಲಾಗಿದೆ.
ಪ್ರಯಾಣಿಕರು ರೈಲಿನಲ್ಲಿ ಆಸನಗಳನ್ನು ಕಾಯ್ದಿರಿಸುವ ಹಾಗೆಯೇ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪಾರ್ಸಲ್ ಸಾಗಣೆಗೆ 120 ದಿನ ಮುಂಚಿತವಾಗಿಯೇ ಸ್ಥಳ ಕಾಯ್ದಿರಿಸಬಹುದಾದ ವ್ಯವಸ್ಥೆಯನ್ನು ರೈಲ್ವೆ ಆರಂಭಿಸಿದೆ.
ಜನಸ್ನೇಹಿಯಾಗಿ ಕಾರ್ಯನಿರ್ವಸುತ್ತಿದ್ದ ನೈರುತ್ಯ ರೈಲ್ವೆ ಇಲಾಖೆ ಈಗ ಗ್ರಾಹಕ ಸ್ನೇಹಿಯಾಗಿ ತನ್ನ ವ್ಯಾಪ್ತಿ ವಿಸ್ತರಿಸಿದ್ದು, ಮತ್ತಷ್ಟು ಸೇವೆಯತ್ತ ದಾಪುಗಾಲು ಹಾಕುತ್ತಿದೆ.