ಹುಬ್ಬಳ್ಳಿ: ಕಾನೂನು ರಕ್ಷಕರೇ ಕಾನೂನು ಉಲ್ಲಂಘನೆ ಮಾಡುತ್ತಿರುವ ಪ್ರಕರಣ ವಾಣಿಜ್ಯ ನಗರಿಯಲ್ಲಿ ಬೆಳಕಿಗೆ ಬಂದಿದೆ.
ಲಾಕ್ ಡೌನ್ ಆದೇಶ ಉಲ್ಲಂಘನೆ ಮಾಡಿದ 150ಕ್ಕೂ ಅಧಿಕ ವಾಹನಗಳನ್ನು ಪೂರ್ವ ಸಂಚಾರಿ ಠಾಣೆ ಹಾಗೂ ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಸೀಝ್ ಮಾಡಿದ್ದರು. ಲಾಕ್ ಡೌನ್ ವೇಳೆ ಅನಾವಶ್ಯಕವಾಗಿ ರಸ್ತೆಗಿಳಿಯುವವರ ವಾಹನ ಸೀಝ್ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಏ.14ರ ನಂತರ ದಂಡ ಕಟ್ಟಿಸಿಕೊಂಡು ವಾಹನ ಬಿಡುವಂತೆಯೂ ಸೂಚಿಸಿತ್ತು. ಆದ್ರೆ, ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ ಹುಬ್ಬಳ್ಳಿಯ ಸಂಚಾರ ಪೊಲೀಸರು, ಹೆಲ್ಮೆಟ್ ರಹಿತ ಸಂಚಾರ ಫೈನ್ ಹಾಕಿ ವಾಹನ ಬಿಡುತ್ತಿದ್ದಾರೆ.
ಏ.14ರ ವರೆಗೆ ಸೀಝ್ ಆದ ವಾಹನಗಳನ್ನು ಬಿಡಬಾರದು ಎಂಬ ಆದೇಶವನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ವರ್ತಿಸುತ್ತಿರುವುದು ಟೀಕೆಗೆ ಗುರಿಯಾಗಿದೆ.