ಹುಬ್ಬಳ್ಳಿ : ವಾಣಿಜ್ಯನಗರಿಯಲ್ಲಿ ಅದ್ಧೂರಿಯಾಗಿ ಮಣ್ಣೆತ್ತಿನ ಅಮವಾಸ್ಯೆ ಹಬ್ಬವನ್ನು ಇಂದು ಆಚರಿಸಲಾಯಿತು. ಈ ಹಬ್ಬದಲ್ಲಿ ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸಲಾಗುತ್ತದೆ. ಇದು ಮುಂಗಾರಿನ ಆರಂಭದ ಹಬ್ಬವೂ ಆಗಿದೆ. ರೈತರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಇಲ್ಲಿ ಪೂಜಿಸಿ ಸಂಭ್ರಮಪಡುತ್ತಾರೆ.
ಒಂದು ವೇಳೆ ಮನೆಯಲ್ಲಿ ಎತ್ತುಗಳು ಇಲ್ಲದಿದ್ದರೇ, ಮಣ್ಣಿನಿಂದ ತಯಾರಿಸಿದ ಜೋಡಿ ಎತ್ತುಗಳನ್ನು ತಂದು ಪೂಜಿಸಲಾಗುತ್ತದೆ. ಆಷಾಢ, ಶ್ರಾವಣ ಮತ್ತು ಭಾದ್ರಪದ ಮಾಸಗಳು ಮಣ್ಣು ಪೂಜೆಯ ದ್ಯೋತಕವಾಗಿವೆ. ಮಣ್ಣೆತ್ತು, ಗುಳ್ಳವ್ವ, ಹುತ್ತಪ್ಪ, ಗಣಪ ಹಾಗೂ ಜೋಕುಮಾರ ಈ ಐದೂ ಮಣ್ಣಿನಿಂದ ಮಾಡಿದ ದೈವಗಳನ್ನು ಮೂರು ಮಾಸಗಳಲ್ಲಿ ಪೂಜಿಸುತ್ತಾರೆ.
ಇದನ್ನೂ ಓದಿ: ಧಾರ್ಮಿಕ ಕ್ಷೇತ್ರ ಮುನ್ನೆಲೆಗೆ ಬರುವ ಸಂದರ್ಭದಲ್ಲಿ ವಿವಾದ ಸಹಜ : ವಿನಯ್ ಗುರೂಜಿ