ETV Bharat / state

ಮರುಮೌಲ್ಯಮಾಪನದ ಫಲಿತಾಂಶಕ್ಕೂ ಮುನ್ನ ಪರೀಕ್ಷೆ ಶುಲ್ಕ ವಸೂಲಿ: ಹರಕೆ ಕುರಿಯಂತೆ ಅಣಕು ಮಾಲೆ ಧರಿಸಿ ಮುಷ್ಕರ - Hubli Law University latest news

ಕಾನೂನು ಪದವಿಯ 6ನೇ ಸೆಮಿಸ್ಟರ್ ಪರೀಕ್ಷೆ ಬರೆದ‌ ಸಾವಿರಾರು ವಿದ್ಯಾರ್ಥಿಗಳು ಪ್ರತಿ ಪತ್ರಿಕೆಗೆ 550 ರೂ. ಮರುಮೌಲ್ಯಮಾಪನದ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದರು‌. ಅಂತಿಮ ಫಲಿತಾಂಶಕ್ಕೂ ಮುನ್ನವೇ ಮತ್ತೊಮ್ಮೆ ಪರೀಕ್ಷೆ ನಡೆಸಲು ಮುಂದಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿ ಹರಕೆ ಕುರಿಯಂತೆ ಅಣಕು ಮಾಲೆ ಧರಿಸಿ ಮುಷ್ಕರ ನಡೆಸಿದರು.

students
ವಿದ್ಯಾರ್ಥಿಗಳು
author img

By

Published : Mar 5, 2021, 1:22 PM IST

Updated : Mar 5, 2021, 1:45 PM IST

ಹುಬ್ಬಳ್ಳಿ: ಕಾನೂನು ವಿಶ್ವವಿದ್ಯಾನಿಲಯವು ಪದವಿಯ 6ನೇ ಸೆಮಿಸ್ಟರ್​ನ ಮರುಮೌಲ್ಯಮಾಪನದ ಫಲಿತಾಂಶ ಪ್ರಕಟಿಸುವ ಮೊದಲೇ ಪೂರಕ ಪರೀಕ್ಷೆಯ ಶುಲ್ಕ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದ ವಿದ್ಯಾರ್ಥಿಗಳು ಹರಕೆ ಕುರಿಯಂತೆ ಅಣಕು ಮಾಲೆ ಧರಿಸಿ ಪ್ರತಿಭಟನೆ ನಡೆಸಿದ್ದಾರೆ.

ಕಾನೂನು ವಿಶ್ವ ವಿದ್ಯಾಲಯದ 6ನೇ ಸೆಮಿಸ್ಟರ್​ನ ವಿದ್ಯಾರ್ಥಿಗಳು ಕಳೆದ ನ. 23ರಂದು ಪರೀಕ್ಷೆ ಬರೆದಿದ್ದು, ಜ. 17ರಂದು ಫಲಿತಾಂಶ ಹೊರಬಂದಿತ್ತು. ನಿಯಮದ ಅನುಸಾರ ಫೆ. 3ರ ಒಳಗೆ ಸುಮಾರು 16 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶುಲ್ಕ ಪಾವತಿಸಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿದ್ದರು. ಮರುಮೌಲ್ಯಪಾನದ ಫಲಿತಾಂಶ ಪ್ರಕಟಿಸುವ ಮೊದಲು ವಿವಿ ಆಡಳಿತ ಮಂಡಳಿ, ಪರೀಕ್ಷಾ ದಿನಾಂಕ ಘೋಷಿಸಿ ಮತ್ತೊಮ್ಮೆ ಶುಲ್ಕ ಭರ್ತಿ ಮಾಡಿಕೊಳ್ಳುತ್ತಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಪಾದಿಸಿದ್ದಾರೆ.

ಹರಕೆ ಕುರಿಯಂತೆ ಅಣಕು ಮಾಲೆ ಧರಿಸಿ ವಿದ್ಯಾರ್ಥಿಗಳಿಂದ ಮುಷ್ಕರ

ಪದವಿಯ 6ನೇ ಸೆಮಿಸ್ಟರ್ ಪರೀಕ್ಷೆ ಬರೆದ‌ ಸಾವಿರಾರು ವಿದ್ಯಾರ್ಥಿಗಳು ಪ್ರತಿ ಪತ್ರಿಕೆಗೆ 550 ರೂ. ಮರುಮೌಲ್ಯಮಾಪನದ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದರು‌. ಅಂತಿಮ ಫಲಿತಾಂಶಕ್ಕೂ ಮುನ್ನವೇ ಮಾರ್ಚ್ 18ರಂದು ಮತ್ತೊಮ್ಮೆ ಪರೀಕ್ಷೆ ನಡೆಸಲು ಕಾನೂನು ವಿವಿ ಮುಂದಾಗಿರುವುದು ಎಷ್ಟು ಸರಿ? ಒಂದು ವೇಳೆ ಫಲಿತಾಂಶದಲ್ಲಿ ತೇರ್ಗಡೆಯಾಗಿ ಶುಲ್ಕ ಕಟ್ಟಿದವರ ಹಣ ಮರು ಪಾವತಿ ಹೇಗೆ ಎಂದು ಪ್ರಶ್ನಿಸಿದರು.

ಮರುಮೌಲ್ಯಮಾಪನದ ಫಲಿತಾಂಶ ಪ್ರಕಟಿಸುವ ಮೊದಲೇ ವಿವಿಯು ಮತ್ತೊಮ್ಮೆ ಪರೀಕ್ಷೆಗೆ ಶುಲ್ಕ ಪಡೆದುಕೊಳ್ಳುತ್ತಿದೆ. ಈ ಮೂಲಕ ವಿದ್ಯಾರ್ಥಿಗಳನ್ನು ಶೋಷಣೆ ಮಾಡುತ್ತಿದೆ. ತಕ್ಷಣವೇ ಇದನ್ನು ನಿಲ್ಲಿಸದಿದ್ದರೆ ತಮ್ಮ ಹೋರಾಟ ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.

Last Updated : Mar 5, 2021, 1:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.