ಹುಬ್ಬಳ್ಳಿ: ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಶಿಥಿಲಗೊಂಡ ಕಟ್ಟಡದ ತೆರವು ಕಾರ್ಯಾಚರಣೆಗೆ ನಡೆಸಿದರು. ನಗರದ ಬ್ರಾಡ್ ವೇಯಲ್ಲಿರುವ ಶಹರ ಪೊಲೀಸ್ ಠಾಣೆ ಎದುರಿನ ಮಹಾನಗರ ಪಾಲಿಕೆ ಕಾಂಪ್ಲೆಕ್ಸ್‌ನಲ್ಲಿನ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ಈಗಾಗಲೇ ಕಟ್ಟಡ ಶಿಥಿಲಗೊಂಡಿದ್ದು, ಹಲವಾರು ಬಾರಿ ನೋಟಿಸ್ ನೀಡಿದರೂ ಬಾಡಿಗೆದಾರರು ಖಾಲಿ ಮಾಡಲು ಮುಂದಾಗದ ಹಿನ್ನೆಲೆಯಲ್ಲಿ ದಿಢೀರ್ ಭೇಟಿ ನೀಡಿ ಪಾಲಿಕೆ ಸಿಬ್ಬಂದಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು ಕಾರ್ಯಾಚರಣೆ ಕೈಗೊಂಡರು.
ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲಿ ವಿಚಿತ್ರ ಘಟನೆ: ಮನೆ ಕಾಂಪೌಂಡ್ನಲ್ಲೇ ಶವ ಸಂಸ್ಕಾರ, ಸ್ಥಳೀಯರಿಂದ ಭಾರಿ ವಿರೋಧ- ಕಲ್ಲು ತೂರಾಟ!
ಅನೇಕ ವರ್ಷಗಳಷ್ಟು ಹಳೆಯದಾದ ಕಟ್ಟಡ ಸಂಪೂರ್ಣ ಶಿಥಿಲಗೊಂಡಿತ್ತು. ಕಟ್ಟಡದ ಸಾಮರ್ಥ್ಯ ತೀರಾ ಹದಗೆಟ್ಟಿದ್ದು, ಯಾವಾಗ ಬೇಕಾದರೂ ಬೀಳುವ ಸ್ಥಿತಿಯಲ್ಲಿತ್ತು. ಈ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದರು. ಆಗ ಅಂಗಡಿಯಲ್ಲಿದ್ದ ವಸ್ತುಗಳನ್ನು ಸ್ಥಳಾಂತರಿಸಲು ಮಾಲೀಕರಿಗೆ 30 ನಿಮಿಷಗಳ ಕಾಲಾವಕಾಶ ಕೊಡಲಾಗಿತ್ತು.
ಈ ವೇಳೆ ಅಂಗಡಿಕಾರರು ಶಾಪ್ಗಳನ್ನು ಖಾಲಿ ಮಾಡುತ್ತೇವೆ. ಆದರೆ ನಮಗೆ ಹೊಸ ಕಟ್ಟಡದಲ್ಲಿ ಅಲಾಟ್ಮೆಂಟ್ ನೀಡುವಂತೆ ಮನವಿ ಮಾಡಿದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ