ಹುಬ್ಬಳ್ಳಿ : ಕಲೆ ಎನ್ನುವುದು ಮಾನವೀಯ ಸಂಬಂಧಗಳನ್ನು ಮತ್ತಷ್ಟು ಗಾಢಗೊಳಿಸುವ ಸೇತುವೆ. ತಮ್ಮ ಕುಂಚದ ಮೂಲಕ ಇಲ್ಲೊಬ್ಬ ಯುವ ಕಲಾವಿದ ಆ ಮಾತನ್ನ ನಿಜವಾಗಿಸ್ತಿದ್ದಾರೆ..
ಓದಿ: ಶಾಲಾ ಶುಲ್ಕ ಸಮಸ್ಯೆ ಪರಿಹಾರಕ್ಕೆ ಸಮಿತಿಗಳ ರಚನೆ: ಶಿಕ್ಷಣ ಸಚಿವ ಸುರೇಶ್ ಕುಮಾರ್
ಸಂತೋಷ ಹಸಬಿ ವಿದ್ಯಾರ್ಥಿ ದೆಸೆಯಲ್ಲೇ ಸಾಕಷ್ಟು ಭರವಸೆ ಮೂಡಿಸಿರುವ ಕಲಾವಿದರಾಗಿದ್ದಾರೆ. ಮೂಲತಃ ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದ ಸಂತೋಷ್, ಕೃಷಿ ಕುಟುಂಬದಿಂದ ಬಂದಿದ್ದರೂ ಚಿಕ್ಕ ವಯಸ್ಸಿನಲ್ಲೇ ಚಿತ್ರಕಲೆ ಬಗ್ಗೆ ಆಸಕ್ತಿ ಹೊಂದಿದ್ದಾರೆ.
ತಮ್ಮದೇ ಶೈಲಿಯಲ್ಲಿ ಕೈಚಳಕದಿಂದ ಚಿತ್ರ ಬಿಡಿಸಿ ಹಲವಾರು ಪ್ರಶಸ್ತಿ ಬಾಚಿಕೊಂಡಿದ್ದಾರೆ. ಚಿತ್ರಕಲೆ ಉಸಿರಾಗಿಸಿಕೊಂಡು ಅವಿರತ ಶ್ರಮದಿಂದ ಭಿನ್ನ-ವಿಭಿನ್ನವಾಗಿ ಹತ್ತು ಹಲವಾರು ಸಂದೇಶ ಸಾರುವ ಚಿತ್ರಗಳನ್ನು ಬಿಡಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಸದ್ಯ ಹುಬ್ಬಳ್ಳಿ ಮಹಾಂತೇಶ್ ಲಲಿತ ಕಲಾ ಮಹಾವಿದ್ಯಾಲಯದಲ್ಲಿ ವಿದ್ಯಾಭ್ಯಾಸದ ಜೊತೆಗೆ ಚಿತ್ರಕಲೆ ಅಭ್ಯಾಸ ಮಾಡುತ್ತಿರುವ ಈತ, ನಾಗಾಲೋಟ ಕುದುರೆ ಕಲಾಕೃತಿ, ಪಕ್ಷಿ ಸಂಕುಲಗಳ ಸರಣಿ ಹಾಗೂ ಕಲ್ಪನೆ ಆಧಾರಿತ ಮಹಿಳೆ ಚಿತ್ರದ ಮೂಲಕ ಮೂರು ಬಾರಿ ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಸ್ಟೋಕರ್ ವರ್ಕ್, ನೈಪ್ ವರ್ಕ್ ಪೇಂಟಿಂಗ್, ಕ್ಯಾನ್ವಾಸ್ ಪೇಂಟಿಂಗ್, ವಾಟರ್ ಕಲರ್, ಲ್ಯಾಂಡ್ ಸ್ಕೇಪ್ ಹೀಗೆ ಹಲವಾರು ಚಿತ್ರಗಳ ಮೂಲಕ ಆದಾಯಗಳಿಸುತ್ತಾ ತನ್ನ ವಿಧ್ಯಾಭ್ಯಾಸ ಮಾಡುತ್ತಿರುವುದಕ್ಕೆ ಕಾಲೇಜಿನ ಪ್ರಾಂಶುಪಾಲರು ಸಹ ಈತನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ತನ್ನ ವಿಭಿನ್ನ ಚಿತ್ರಕಲೆ ಮೂಲಕ ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವ ಸಂತೋಷ, ಇನ್ನೂ ಹೆಚ್ಚು ಚಿತ್ರ ಬಿಡಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ.
