ETV Bharat / state

ರಾಜ್ಯ ಸರ್ಕಾರ ಮುಸ್ಲಿಂ ಕಾಲೇಜುಗಳ ನಿರ್ಮಾಣ ಮಾಡುತ್ತಿರುವುದು ಖಂಡನೀಯ: ಪ್ರಮೋದ್​ ಮುತಾಲಿಕ್​

ರಾಜ್ಯದ ಬಿಜೆಪಿ ಸರ್ಕಾರ 10 ಮುಸ್ಲಿಂ ಕಾಲೇಜುಗಳನ್ನು ಆರಂಭಿಸಲು ಹೊರಟಿದೆ. ಒಂದು ವೇಳೆ ಆರಂಭಿಸಿದ್ರೆ, ಎಲ್ಲಾ ಹಿಂದೂ ಸಂಘಟನೆಗಳ‌ ಒಕ್ಕೂಟದಿಂದ ರಾಜ್ಯಾದ್ಯಂತ ಹೋರಾಟ‌ ಮಾಡುವುದಾಗಿ ಮುತಾಲಿಕ್​ ಎಚ್ಚರಿಕೆಯನ್ನು ನೀಡಿದರು.

author img

By

Published : Nov 30, 2022, 1:03 PM IST

Pramod Muthalik
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ಧಾರವಾಡ: ರಾಜ್ಯ ಸರ್ಕಾರ ಮುಸ್ಲಿಂ ಕಾಲೇಜುಗಳನ್ನು ನಿರ್ಮಾಣ ಮಾಡುತ್ತಿರುವ‌‌ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರ 10 ಮುಸ್ಲಿಂ ಕಾಲೇಜುಗಳನ್ನು ಆರಂಭ ಮಾಡಲು ಹೊರಟಿರುವುದು ಖಂಡನೀಯ ಎಂದು ಸರ್ಕಾರದ ವಿರುದ್ಧ ಮುತಾಲಿಕ್​ ಹರಿಹಾಯ್ದಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಸರ್ಕಾರದ ಈ ನಿರ್ಧಾರವನ್ನು ನಾನು ಬಲವಾಗಿ ವಿರೋಧ ಮಾಡ್ತೇನೆ. ಎಲ್ಲಾ ಹಿಂದೂ ಸಂಘಟನೆಗಳ‌ ಒಕ್ಕೂಟದಿಂದ ರಾಜ್ಯಾದ್ಯಂತ ಹೋರಾಟ‌ ಮಾಡುವುದಾಗಿ ಅವರು ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ಈ ಕಾಲೇಜು ಬಗ್ಗೆ ಸರ್ಕಾರ ನಿರ್ಧಾರ ಮಾಡಿದ್ದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಓಲೈಕೆ ರಾಜಕಾರಣದಿಂದ ಗಲಭೆ, ಭಯೋತ್ಪಾದನೆ : ಮುತಾಲಿಕ್ ಆರೋಪ

ಎರಡು ಕಾಲೇಜಿಗೆ ಎರಡೂವರೆ‌ ಕೋಟಿ ಖರ್ಚು ಮಾಡಿದ್ದೀರಿ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮುಸ್ಲಿಂ ಕಾಲೇಜುಗಳಿಗೆ ಅವಕಾಶ ಮಾಡಿ‌ಕೊಡಲ್ಲ ಎಂದು ಮುತಾಲಿಕ್​​ ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.