ಮಂಗಳೂರು/ಧಾರವಾಡ : ನಗರಗಳಲ್ಲಿ ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಪಾಲಿಕೆಗಳಿಗೆ ದೊಡ್ಡ ಸವಾಲಾಗಿದೆ.
ಮಂಗಳೂರಿನಲ್ಲಿ 350ಕ್ಕೂ ಹೆಚ್ಚು ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಆದ್ರೆ, ಪಚ್ಚನಾಡಿಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕೇವಲ 175 ಟನ್ ತ್ಯಾಜ್ಯವನ್ನಷ್ಟೇ ವಿಲೇವಾರಿ ಮಾಡುವ ಸಾಮರ್ಥ್ಯವಿದೆ. ಉಳಿದ ತ್ಯಾಜ್ಯವನ್ನು ಪಚ್ಚನಾಡಿಯ ವಿಶಾಲ ಭೂಮಿಯಲ್ಲಿ ಲ್ಯಾಂಡ್ ಫಿಲ್ಲಿಂಗ್ ಮಾಡಿ ಮುಚ್ಚಲಾಗುತ್ತಿದೆ. ಹಾಗಾಗಿ, ಪಚ್ಚನಾಡಿಯ ಸಂಸ್ಕರಣಾ ಘಟಕ ಮೇಲ್ದರ್ಜೆಗೇರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ ಅಂತಾರೆ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಅವರು.
ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ಮಾತ್ರ ಇಂತಹ ಯಾವುದೇ ಸಮಸ್ಯೆಗೆ ಅವಕಾಶವಿಲ್ಲ. 400 ಟನ್ನಷ್ಟು ಘನ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, 450 ಟಿಪಿಡಿ ಸಾಮರ್ಥ್ಯದ ಕಾಂಪೋಸ್ಟ್ ಘಟಕ ಸ್ಥಾಪಿಸಲಾಗಿದೆ. ಉಳಿದಿರೋ ಹಳೆ ಕಸವನ್ನು ಮರುಬಳಕೆ ಮಾಡಲು ಪಾಲಿಕೆ ಚಿಂತಿಸಿದೆ.
ಇದನ್ನೂ ಓದಿ: ಕೆಲ ಕ್ರೀಡಾಶಾಲೆಗಳಿಗಿಲ್ಲ ಪೂರ್ಣ ಪ್ರಮಾಣದ ತರಬೇತುದಾರರು.. ಹಿಂಗಾದ್ರೇ ಹೆಂಗೇ..
ತ್ಯಾಜ್ಯ ಸಂಸ್ಕರಣಾ ಘಟಕದ ಸಾಮರ್ಥ್ಯಕ್ಕಿಂತ ಹೆಚ್ಚು ತ್ಯಾಜ್ಯ ಉತ್ಪಾದನೆಯಾಗುತ್ತಿರೋದ್ರಿಂದಲೇ ನಿರ್ವಹಣೆ ಪಾಲಿಕೆಗೆ ತಲೆನೋವಾಗಿದೆ. ಹಾಗಾಗಿ, ನೂತನ ಘಟಕ ಆರಂಭಕ್ಕೆ ಪಾಲಿಕೆಗಳು ಮುಂದಾಗಬೇಕಿದೆ.