ಧಾರವಾಡ : ಲಾಕ್ಡೌನ್ದಿಂದ ಅನೇಕರು ಈ ವರ್ಷ ತಮ್ಮ ಜಮೀನಿನನ್ನು ನಂಬಿ ಕೆಲಸ ಮಾಡುತ್ತಿದ್ದಾರೆ. ಮಳೆಯನ್ನೇ ನಂಬಿ ಮುಂಗಾರು ಬಿತ್ತನೆ ಮಾಡಿದ್ದ ರೈತನಿಗೆ ಅಂತು ಮಳೆರಾಯ ಆಸರೆಯಾಗಿದ್ದಾನೆ.
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ಹೊಲಗಳೆಲ್ಲವು ಹಸಿರಾಗಿವೆ. ರೈತರು ಹೆಚ್ಚು ಶೇಂಗಾ, ಹೆಸರು, ಅಲಸಂದಿ, ಹತ್ತಿ, ಸೂರ್ಯಕಾಂತಿ ಹಾಗೂ ಆಲೂಗಡ್ಡೆ ಹೀಗೆ ಅನೇಕ ಬೆಳೆಗಳನ್ನು ನಂಬಿ ಜೀವನ ನಡೆಸುತ್ತಾರೆ. ಎಲ್ಲ ಬೆಳೆಗಳು ಉತ್ತಮ ಫಸಲು ನೀಡುವ ಮುನ್ಸೂಚನೆ ನೀಡಿವೆ.
ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆಗಳು ಸರಿಯಾದ ಇಳುವರಿ ಬಾರದೇ ಕಷ್ಟ ಅನುಭವಿಸಿದ್ದೆವು. ಈ ವರ್ಷ ಉತ್ತಮ ಮಳೆಯಾಗುತ್ತಿದ್ದು, ಉತ್ತಮ ಫಸಲು ಬರುವ ಭರವಸೆ ಇದೇ ಎಂದು ತಡಕೊಡ ಗ್ರಾಮದ ರೈತ ಸಂತಸ ವ್ಯಕ್ತಪಡಿಸಿದ್ದಾರೆ.