ETV Bharat / state

ಮಳೆ ಆರ್ಭಟಕ್ಕೆ ಮನೆ ಗೋಡೆ ಕುಸಿದರೂ ನಾಲ್ವರು ಪಾರಾದರು.. ಪಕ್ಕದ ಮನೆಯ ನಾಲ್ವರು ಸಿಲುಕಿದ್ದರು.. - ಅಗ್ನಿಶಾಮಕ ಸಿಬ್ಬಂದಿ

ಹುಬ್ಬಳ್ಳಿಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಮನೆಗೋಡೆ ಕುಸಿದು ಮನೆಯೊಳಗೆ ಸಿಲುಕಿದ್ದ ನಾಲ್ವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ..

four people rescued from the collapsed home at hubli
ವರುಣನ ಆರ್ಭಟಕ್ಕೆ ಕುಸಿದ ಮನೆ ಗೋಡೆ
author img

By

Published : Nov 20, 2021, 5:02 PM IST

ಹುಬ್ಬಳ್ಳಿ : ಕಳೆದ ನಾಲ್ಕು ದಿನದಿಂದ ನಗರದಲ್ಲೂ ಭಾರಿ ಮಳೆ ಆಗುತ್ತಿದೆ. ಇದರಿಂದಾಗಿ ನಗರದ ಗಣೇಶಪೇಟೆಯ ಬಿಂದರಗಿ ಓಣಿಯಲ್ಲಿ ಮನೆಯೊಂದರ ಗೋಡೆ ಕುಸಿದ ಪರಿಣಾಮ ಪಕ್ಕದ ಮನೆಯ ನಾಲ್ವರು ಅದರೊಳಗೆ ಸಿಲುಕಿದ್ದರು. ಅವರನ್ನ ತಕ್ಷಣವೇ ರಕ್ಷಿಸಲಾಗಿದೆ.

ಗೋಡೆ ಕುಸಿಯುತ್ತಿರುವುದನ್ನು ಅರಿತ ಮನೆಯ ಮಾಲೀಕ ಬಸವಂತ ಶಿಂಧೆ ಎಂಬುವರು ತಕ್ಷಣವೇ ಎಚ್ಚೆತ್ತು ಪತ್ನಿ ಹಾಗೂ ತಮ್ಮ ಮೂವರು ಮಕ್ಕಳು ಓಡಿ ಹೊರ ಬಂದಿದ್ದಾರೆ. ಈ ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ, ಪಕ್ಕದ ಮನೆಯ ಮೇಲೆ ಈ ಮಣ್ಣಿನ ಗೋಡೆ ಬಿದ್ದಿದ್ದರಿಂದಾಗಿ ಅವರ ಮನೆಯಲ್ಲಿ ನಾಲ್ಕು ಜನ ಸಿಲುಕಿದ್ದರು. ಸರಿಯಾದ ಸಮಯಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ನಾಲ್ಕೂ ಜನರನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ:ಇನ್ನೂ 5 ದಿನ ಭಾರಿ ಮಳೆ: ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಬೆಳಗಾವಿ ಡಿಸಿ ಸೂಚನೆ

ಒಂದೇ ಕುಟುಂಬದ ಆರಿಫ್ ಖಾನ್, ಶೈನಾಜ್​​ ಬಾನು, ಸಾಧಿಕ್ ಹಾಗೂ ನಾಜಿಯಾ ಎಂಬುವರನ್ನು ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಚಂದ್ರಶೇಖರ ಭಂಡಾರಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರ ಜೀವ ರಕ್ಷಣೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.