ಹುಬ್ಬಳ್ಳಿ : ಮಾಜಿ ಸಿಎಂ ಬಿಎಸ್ವೈಗೆ ಕೇಂದ್ರದಲ್ಲಿ ಒಬ್ಬರನ್ನೂ ಮಂತ್ರಿ ಮಾಡೋ ತಾಕತ್ತಿಲ್ಲ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ವಿನಯ್ ಕುಲಕರ್ಣಿ, ನಾವೆಲ್ಲ ವೀರಶೈವ ಲಿಂಗಾಯತರು ಕಾಂಗ್ರೆಸ್ನಲ್ಲಿ ಇದ್ದೇವೆ. ಅನಂತಕುಮಾರ್, ಅನಂತಕುಮಾರ್ ಹೆಗಡೆ ಇಬ್ಬರೂ ಮಂತ್ರಿಯಾದರು. ಪ್ರಹ್ಲಾದ್ ಜೋಶಿ ಪೆಟ್ರೋಲಿಯಂ ಕಾರ್ಪೋರೇಷನ್ ಅಧ್ಯಕ್ಷರಾಗಿದ್ದರು. ಯಡಿಯೂರಪ್ಪಗೆ ಆ ಟೈಮಲ್ಲಿ ಲಿಂಗಾಯತರ ಬಗ್ಗೆ ಕಾಳಜಿ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಲಿಂಗಾಯತರ ನೆನಪಾಗುತ್ತದೆ. ಮಾಜಿ ಸಿಎಂ ಜೆ.ಎಚ್.ಪಟೇಲ್ ನಂತರ ಡಮ್ಮಿ ಲಿಂಗಾಯತರೂ ಸಿಎಂ ಆಗಿದ್ದಾರೆ. ಸಮಾಜಕ್ಕಾಗಿ ಇವರ ಕೊಡುಗೆ ಶೂನ್ಯ ಎಂದು ಕಿಡಿಕಾರಿದ್ರು.