ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಹೊಂದಿರುವ ಹಾಗೂ ಲಕ್ಷಾಂತರ ಭಕ್ತರ ಆರಾಧ್ಯ ದೈವ ಸಿದ್ಧಾರೂಢನ ಸನ್ನಿಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವಿಶೇಷ ಜನಪದ ಜಾತ್ರೆ ಹಮ್ಮಿಕೊಳ್ಳಲಾಗಿತ್ತು.
ಜಾತ್ರೆಯಲ್ಲಿ ದೇಶಿ ಜಾನಪದ ಕಲೆಗಳು ಅನಾವರಣಗೊಂಡವು. ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ ಕಲಾವಿದರು ಜನಪದ, ಗೀಗೀ ನೀಲಗಾರ, ಸೊಬಾನೆ ಹಾಗೂ ತತ್ವಪದಗಳನ್ನು ಹಾಡಿದರು. ಪೂಜಾ, ಪಟ, ವೀರಗಾಸೆ, ಲಂಬಾಣಿ, ಡಮಾಮಿ, ಪುಗಡಿ, ಹುಲಿವೇಷ, ಕೋಲಾಟ ಹಾಗೂ ಸೋಮನ ಕುಣಿತ ಪ್ರದರ್ಶನಗೊಂಡವು.
ಕಹಳೆ, ಕಂಸಾಳೆ, ಜಗ್ಗಲಿಗೆ, ಡೊಳ್ಳು, ನಗಾರಿ, ತಮಟೆ, ಡೋಲು, ಕರಡಿ ಮಜಲು, ಚೌಡಿಕೆಗಳ ನಾದ ಸಿದ್ದಾರೂಡ ಮಠದ ಆವರಣದಲ್ಲಿ ಮೊಳಗಿದವು.