ETV Bharat / state

ಪೆಟ್ರೋಲ್ ಬಂಕ್​ನಲ್ಲೇ ಹೊತ್ತಿ ಉರಿದ ಓಮ್ನಿ ಕಾರು: ಭಯಾನಕ ದೃಶ್ಯ ಸಿಸಿಟಿಯಲ್ಲಿ ಸೆರೆ - fire at petrol bunk

ಹುಬ್ಬಳ್ಳಿಯ ಪೆಟ್ರೋಲ್​ ಪಂಪ್​ ವೊಂದರಲ್ಲಿ ಡೀಸೆಲ್​ ಹಾಕಿಸಿಕೊಳ್ಳಲು ಬಂದಿದ್ದ ಓಮ್ನಿ ಕಾರೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಹೋದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

fire breaks out in omni car at petrol bunk
ಪೆಟ್ರೋಲ್ ಬಂಕ್​ನಲ್ಲಿ ಹೊತ್ತಿ ಉರಿದ ಓಮ್ನಿ ಕಾರು
author img

By

Published : Apr 11, 2021, 11:54 AM IST

ಹುಬ್ಬಳ್ಳಿ: ನಿನ್ನೆ ರಾತ್ರಿ ನಗರದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ.

ಓಮ್ನಿಯೊಂದು ನಗರದ ಹಳೇ ಹುಬ್ಬಳ್ಳಿ ಇಂಡಿ ಪಂಪ್ ಬಳಿ ಇರುವ ಪೆಟ್ರೋಲ್ ಬಂಕ್‌ನಲ್ಲಿ, ಡೀಸೆಲ್ ಹಾಕಿಸಿಕೊಳ್ಳುವ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿದ ಪರಿಣಾಮ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಪೆಟ್ರೋಲ್ ಬಂಕ್​ನಲ್ಲಿ ಹೊತ್ತಿ ಉರಿದ ಓಮ್ನಿ ಕಾರು

ಬೆಂಕಿ ಹತ್ತಿರುವ ದೃಶ್ಯ ಪೆಟ್ರೋಲ್ ಬಂಕ್ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ತಿದ್ದಂತೆ ಡ್ರೈವರ್ ಕಾರಿನಿಂದ ಇಳಿದು ಓಡಿ ಹೋಗಿದ್ದು, ಪೆಟ್ರೋಲ್ ಬಂಕ್ ಸಿಬ್ಬಂದಿ ಫೈಯರ್ ಬಾಕ್ಸ್​ನಿಂದ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.