ಧಾರವಾಡ: ಫೆಬ್ರವರಿ 23ರಂದು ಬೆಂಗಳೂರಿನಲ್ಲಿ ಖಾಸಗಿ ಶಾಲೆಗಳ ಪ್ರತಿಭಟನೆ ಹಿನ್ನೆಲೆ ಧಾರವಾಡ-ಹುಬ್ಬಳ್ಳಿ ನಗರದ ಖಾಸಗಿ ಶಾಲೆಗಳು ಅಂದು ಬಂದ್ ಮಾಡಿ ಬೆಂಬಲ ಸೂಚಿಸಲಿವೆ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಶಂಕರ್ ಹಲಗತ್ತಿ ಹೇಳಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಲು ಒಂದು ದಿನ ಶಾಲೆಗಳನ್ನು ಬಂದ್ ಮಾಡಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಬಂದ್ ಮಾಡಿ ಜಾಥಾ ನಡೆಸಲು ನಿರ್ಧಾರ ಮಾಡಿದ್ದು, ಫೆ. 23 ರಂದು ಬೆಂಗಳೂರಿನಲ್ಲಿ ಕಾಂಪ್ಸ್ ಮತ್ತು ಇತರ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದೆ.
ಇದಕ್ಕೆ ಅವಳಿ ನಗರದ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಬೆಂಬಲ ಸೂಚಿಸಿವೆ. ಅನುದಾನ ರಹಿತ ಖಾಸಗಿ ಶಾಲೆಗಳ ಅಭಿವೃದ್ಧಿ ಸಂಸ್ಥೆ ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳ ಸಂಘದಿಂದ ಜಾಥಾ ನಡೆಯಲಿದೆ. ಅಂದು ಅವಳಿ ನಗರದ 100ಕ್ಕೂ ಹೆಚ್ಚು ಖಾಸಗಿ ಶಾಲೆಗಳು ಬಂದ್ ಆಗಲಿವೆ. ಶಾಲೆಗಳನ್ನು ಬಂದ್ ಮಾಡಿ ಜಾಥಾದಲ್ಲಿ ಶಿಕ್ಷಕರು ಮತ್ತು ಆಡಳಿತ ಮಂಡಳಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಓದಿ : ರಾಜ್ಯಕ್ಕೆ ಕೇರಳ - ಮಹಾರಾಷ್ಟ್ರದಿಂದ ಕೋವಿಡ್ ಹಬ್ಬುವ ಆತಂಕ; ಮುನ್ನೆಚ್ಚರಿಕೆ