ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಗೌರಿಶಂಕರ ವಸತಿ ನಿಲಯದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
![Fatal assault on students of a hostel for petty reasons](https://etvbharatimages.akamaized.net/etvbharat/prod-images/5201356_thumb.jpg)
ನವೆಂಬರ್ 23ರ ರಾತ್ರಿ 8 ಗಂಟೆಗೆ ಗೌರಿಶಂಕರ ವಸತಿ ನಿಲಯಕ್ಕೆ ಬಂದ 7 ಯುವಕರ ಗುಂಪೊಂದು, ಮಿಥುನ್ ರಾಠೋಡ್ ಹಾಗೂ ದನಕಪ್ಪ ನಾಯಕನ ಮೇಲೆ ಸಿಸಿಟಿವಿಯಲ್ಲಿ ಬ್ಯಾಟ್ನಿಂದ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ, ಮಧ್ಯದಲ್ಲಿ ಬಂದ ಮಿಥುನ್ ಸಂಬಂಧಿ ಪ್ರಕಾಶ ರಾಠೋಡ್ ಮೇಲೆಯೂ ಎರಗಿ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದಾರೆ.
ಗಾಯಗೊಂಡವರು ಉಪನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದವರ ಮೇಲೆ ಪ್ರಕರಣ ದಾಖಲಿಸಿದ್ದು, ಪೊಲೀಸರು ಹಲ್ಲೆ ಮಾಡಿ ಪರಾರಿಯಾದ ಯಲ್ಲಪ್ಪ, ನಾಗೇಶ, ಮಹಾಂತೇಶಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.