ETV Bharat / state

ಚೆನ್ನಮ್ಮ ಫ್ಲೈಓವರ್ ನಿರ್ಮಾಣದ ಅಗತ್ಯತೆ ಒಪ್ಪಿದ ತಜ್ಞರ ಸಮಿತಿ : ಯೋಜನೆಯಲ್ಲಿ ಕೆಲ ಮಾರ್ಪಾಡಿಗೆ ಶಿಫಾರಸು - ಫ್ಲೈ ಓವರ್ ನಿರ್ಮಾಣ ಯೋಜನೆಯಲ್ಲಿ ಮಾರ್ಪಾಡು

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಫ್ಲೈಓವರ್ ನಿರ್ಮಾಣದ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ತಜ್ಞರ ಸಲಹಾ ಸಮಿತಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿದ್ದು, ಈ ಕುರಿತಂತೆ ಮಾಹಿತಿ ನೀಡಿದೆ..

Advisory Committee members press conference
ಸಲಹಾ ಸಮಿತಿ ಸದಸ್ಯರ ಪತ್ರಿಕಾಗೋಷ್ಠಿ
author img

By

Published : Nov 20, 2021, 10:49 PM IST

ಹುಬ್ಬಳ್ಳಿ : ಚನ್ನಮ್ಮ ವೃತ್ತದ ಫ್ಲೈ ಓವರ್ ನಿರ್ಮಾಣದ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಬಂದ ಹಿನ್ನೆಲೆ ಯೋಜನೆಯಲ್ಲಿ ಅಗತ್ಯ ಬದಲಾವಣೆ ತರುವ ನಿಟ್ಟಿನಲ್ಲಿ ರಚಿಸಲಾದ ತಜ್ಞರ ಸಮಿತಿ ತನ್ನ ವರದಿಯನ್ನು ಸಿದ್ಧಪಡಿಸಿದೆ. ಸಮಿತಿ ಫ್ಲೈಓವರ್ ನಿರ್ಮಾಣದ ಅಗತ್ಯತೆ ಒಪ್ಪಿಕೊಂಡಿದೆ. ಯೋಜನೆಯಲ್ಲಿ ಹಲವು ಮಹತ್ವದ ಮಾರ್ಪಾಡುಗಳಿಗೆ ಶಿಫಾರಸು ಮಾಡಿದೆ.

ಸಲಹಾ ಸಮಿತಿ ಸದಸ್ಯರ ಪತ್ರಿಕಾಗೋಷ್ಠಿ..

ಈ ಕುರಿತಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಸಲಹಾ ಸಮಿತಿ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಕೆಎಲ್​​ಇ ಇಂಜಿನಿಯರಿಂಗ್ ಕಾಲೇಜು ಉಪ ಕುಲಪತಿ ಅಶೋಕ ಶೆಟ್ಟರ್ ಮಾತನಾಡಿ, ಚೆನ್ನಮ್ಮ ವೃತ್ತದಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡಲು ಹಾಗೂ ಭವಿಷ್ಯದ ದೃಷ್ಟಿಯಿಂದ ಫ್ಲೈ ಓವರ್ ನಿರ್ಮಾಣ ಅತ್ಯಗತ್ಯವಾಗಿದೆ.

ಚೆನ್ನಮ್ಮ ವೃತ್ತಕ್ಕೆ ಸಮಾನಾಂತರವಾಗಿರುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಹೆಚ್ಚು ಭೂಸ್ವಾಧೀನ ಮಾಡಬೇಕಾಗುತ್ತದೆ. ಇದಕ್ಕೆ ಹಣ ವೆಚ್ಚವಾಗುತ್ತದೆ. ಜೊತೆಗೆ ಜನರು‌ ಹಾಗೂ ಮಾರುಕಟ್ಟೆ ಪ್ರದೇಶಗಳನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಇದು ಕಾರ್ಯಸಾಧುವಲ್ಲದ ಯೋಜನೆಯಾಗಿದೆ ಎಂದರು.

ನಗರದಲ್ಲಿ ವಾರ್ಷಿಕವಾಗಿ ಶೇ.7ರಷ್ಟು ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ವಾಹನ ದಟ್ಟಣೆ ಹಾಗೂ ರಸ್ತೆ ಕ್ಷಮತೆ ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚೆನ್ನಮ್ಮ ವೃತ್ತದ ಫ್ಲೈ ಓವರ್ ಯೋಜನೆಯನ್ನು ರೂಪಿಸಿದೆ. ಸದ್ಯ 16 ಸಾವಿರದಷ್ಟಿರುವ ವಾಹನ ದಟ್ಟಣೆ ವಾರ್ಷಿಕ ಶೇ.3.5ರ ಬೆಳವಣಿಗೆ ದರದಲ್ಲಿ ವೃದ್ಧಿಸಿದರೆ, ಚೆನ್ನಮ್ಮ ವೃತ್ತದಲ್ಲಿನ ವಾಹನ ದಟ್ಟಣೆ 2027ಕ್ಕೆ 18 ಸಾವಿರ ಹಾಗೂ 2037ಕ್ಕೆ 24 ಸಾವಿರ ಹೆಚ್ಚಾಗಬಹುದು.

ಭವಿಷ್ಯದಲ್ಲಿ ಸಂಚಾರ ದಟ್ಟಣೆ ತಡೆಗಟ್ಟುವ ನಿಟ್ಟಿನಲ್ಲಿ ಫ್ಲೈಓವರ್ ನಿರ್ಮಾಣ ಅಗತ್ಯವಾಗಿದೆ. ಸಾರ್ವಜನಿಕರ ಆಕ್ಷೇಪಣೆಗಳನ್ನು ಗಮನದಲ್ಲಿಟ್ಟುಕೊಂಡು ಸಮಿತಿ ಹಲವು ಮಾರ್ಪಾಡುಗಳನ್ನು ಫ್ಲೈಓವರ್ ಯೋಜನೆಯಲ್ಲಿ ತರಲು ಶಿಫಾರಸು ಮಾಡಿದೆ ಎಂದರು.

ಫ್ಲೈಓವರ್ ನಿರ್ಮಾಣದಲ್ಲಿ ಐಆರ್​​​ಸಿ(ಇಂಡಿಯನ್ ರೋಡ್ಸ್ ಕಾಂಗ್ರೆಸ್) ಮಾನದಂಡಗಳನ್ನು ಸಂಪೂರ್ಣವಾಗಿ ಪಾಲಿಸಬೇಕು. ವಾಹನಗಳು, ಪಾದಚಾರಿಗಳ ನಡುವಿನ ಸಂಚಾರದ ಸಂಘರ್ಷ ಕಡಿಮೆಯಾಗಬೇಕು. ಅಡೆತಡೆಗಳು ಇಲ್ಲದ ಸುಗಮ ಸಂಚಾರ ಸಾಧ್ಯವಾಗಬೇಕು. ರಸ್ತೆ ಸುರಕ್ಷಿತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ಹೇಳಿದೆ.

3 ಬಿಆರ್​​ಟಿಎಸ್ ಬಸ್ ನಿಲ್ದಾಣಗಳ ಸ್ಥಳಾಂತರ : ಹೊಸೂರು, ಹಳೇ ಬಸ್ ನಿಲ್ದಾಣ ಹಾಗೂ ಪಾಲಿಕೆ ಎದುರಿನ ಬಿಆರ್​​ಟಿಎಸ್ ಬಸ್ ನಿಲ್ದಾಣಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸುವಂತೆ ಸಮಿತಿ ಶಿಫಾರಸು ಮಾಡಿದೆ. ಹೊಸೂರು ಬಸ್ ನಿಲ್ದಾಣವನ್ನು ಐಟಿ ಪಾರ್ಕ್ ಎದುರು, ಹಳೇ ಬಸ್ ನಿಲ್ದಾಣದ ಎದುರಿನ ನಿಲ್ದಾಣವನ್ನು ಹುಬ್ಬಳ್ಳಿಯಿಂದ ಧಾರವಾಡಕ್ಕೆ ಸಂಚರಿಸುವವರಿಗೆ ಅನುಕೂಲವಾಗುವಂತೆ ಬಸವ ವನದ ಹತ್ತಿರ ಸ್ಥಳಾಂತರಿಸಲು ಸೂಚಿಸಲಾಗಿದೆ.

ಪಾಲಿಕೆ ಎದುರಿನ ಬಸ್ ನಿಲ್ದಾಣವನ್ನು ಮುಂದೆ 300‌ ಮೀಟರ್ ದೂರದಲ್ಲಿ ನಿರ್ಮಿಸಬಹುದು. ಇದರಿಂದ ಯೋಜನೆಗೆ ಅನುಕೂಲವಾಗಲಿದೆ. ಮೇಲ್ಸೇತುವೆ ರಸ್ತೆ ಹಾಗೂ ಸೇವಾ ರಸ್ತೆಗಳು 7.5 ಮೀ.ವರೆಗೆ ವಿಸ್ತರಿಸಲಿವೆ. ಪಾದಚಾರಿಗಳ ಅನುಕೂಲವಾಗುವಂತೆ ಫುಟ್ ಪಾತ್ ಸಹ ನಿರ್ಮಿಸಬಹುದಾಗಿದೆ.

ಕೊಪ್ಪಿಕರ್ ರಸ್ತೆ ಹಾಗೂ ಮಾರುಕಟ್ಟೆ ಅನುಕೂಲವಾಗುವಂತೆ ಮೇಲ್ಸೇತುವೆ ನಿರ್ಮಾಣ : ಮೊದಲಿನ ಯೋಜನೆಯಲ್ಲಿ ಗದಗ ರಸ್ತೆಯ ಅಂಬೇಡ್ಕರ್ ವೃತ್ತದ ಎಲ್​​ಐಸಿ ಕಚೇರಿ ಎದುರಿನಿಂದ ಚೆನ್ನಮ್ಮ ವೃತ್ತದವರೆಗೆ ಮೇಲ್ಸೇತುವೆಯನ್ನು ನಿರ್ಮಿಸಲಾಗುತ್ತಿತ್ತು. ಇದನ್ನು ಬದಲಾಯಿಸಲು ಶಿಫಾರಸು ಮಾಡಲಾಗಿದೆ. ಕೊಪ್ಪೀಕರ್ ರಸ್ತೆ ಸಂಪರ್ಕಿಸುವ ರಸ್ತೆಯಿಂದ 30 ಮೀಟರ್ ದೂರದ ಪಾಲಿಕೆ ಎದುರಿನಿಂದ ಮೇಲ್ಸೇತುವೆ ಆರಂಭವಾಗಲಿದೆ. ಇದರಿಂದ ಭೂಸ್ವಾಧೀನ ಹಾಗೂ 450 ಮೀ. ಉದ್ದದ ಸೇತುವೆ ನಿರ್ಮಾಣದ ಖರ್ಚು ಉಳಿಯಲಿದೆ. ಜೊತೆಗೆ ಕೊಪ್ಪೀಕರ್‌ ರಸ್ತೆಯಿಂದ ಹುಬ್ಬಳ್ಳಿ ಮಾರುಕಟ್ಟೆ ಪ್ರದೇಶದ ಸಂಪರ್ಕ ಕಡಿತವಾಗುವುದಿಲ್ಲ. ಜೊತೆಗೆ ಮಾರುಕಟ್ಟೆ ಪ್ರದೇಶಕ್ಕೆ ಆಗಮಿಸುವವರಿಗೂ ಮೇಲ್ಸೇತುವೆ ಬಳಕೆಗೆ ಬರಲಿದೆ.

ವಿಜಯಪುರ ರಸ್ತೆ ಅಭಿವೃದ್ಧಿ: ಚೆನ್ನಮ್ಮ ವೃತ್ತ ಸಂಪರ್ಕಿಸುವ ವಿಜಯಪುರ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ರೈಲ್ವೆ ಸೇತುವೆವರೆಗೆ ಪಿಲ್ಲರ್ ಆಧಾರವಾದ ಮೇಲೆ ಸೇತುವೆ ನಿರ್ಮಿಸಲಾಗುವುದು. ದೇಸಾಯಿ ಸರ್ಕಲ್ ಬಳಿ ಸೇವಾ ರಸ್ತೆಯ ಅಗಲೀಕರಣಕ್ಕೆ ಅಗತ್ಯ ಭೂಸ್ವಾಧೀನ ಮಾಡಿಕೊಳ್ಳಲು ಶಿಫಾರಸು ಮಾಡಲಾಗಿದೆ.‌ ಗದಗ ರಸ್ತೆಯ ಮೇಲ್ಸೇತುವೆ ನಿರ್ಮಾಣದ ವೆಚ್ಚ ತಗ್ಗುವುದರಿಂದ ಯೋಜನೆಯ ವೆಚ್ಚದಲ್ಲಿ ಏರಿಕೆಯಾಗದೆ ವಿಜಯಪುರ ರಸ್ತೆ ಅಭಿವೃದ್ಧಿ ಪಡಿಸಬಹುದಾಗಿದೆ.

ಪಾರ್ಕಿಂಗ್, ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್, ಶೌಚಾಲಯ ನಿರ್ಮಾಣಕ್ಕೆ ಸಲಹೆ : ತಜ್ಞರ ಸಮಿತಿ ಚನ್ನಮ್ಮ ವೃತ್ತದ ಸಂಚಾರ ದಟ್ಟಣೆ ತಗ್ಗಿಸುವ ಜೊತೆಗೆ ವೃತ್ತದ ಸೌಂದರ್ಯೀಕರಣಕ್ಕೂ ಶಿಫಾರಸ್ಸು ಮಾಡಿದೆ. ಫ್ಲೈ ಓವರ್ ತಳಭಾಗದಲ್ಲಿ ಚನ್ನಮ್ಮ ವೃತ್ತದಲ್ಲಿನ ಹೋಟೆಲ್,ಅಂಗಡಿ, ವ್ಯಾಪಾರಸ್ಥರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಬೇಕು. ಅಗತ್ಯ ಇರುವ ಕಡೆ ಶೌಚಾಲಯವನ್ನು ನಿರ್ಮಿಸಬೇಕು. ಗದಗ, ವಿಜಯಪುರ, ಗೋಕುಲ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜರ್ ಸ್ಟೇಷನ್​​​ಗಳನ್ನು ನಿರ್ಮಿಸುವಂತೆ ಶಿಫಾರಸ್ಸು ಮಾಡಿದೆ.

ಬಳಿಕ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾತನಾಡಿ, ಸಮಿತಿ ವರದಿಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭಾಗಶಃ ಒಪ್ಪಿಕೊಂಡಿದ್ದು, ಶಿಫಾರಸ್ಸಿ ಅನುಸಾರ ಯೋಜನೆಯಲ್ಲಿ ಬದಲಾವಣೆ ಮಾಡಲು ದೆಹಲಿ ಕೇಂದ್ರ ಕಚೇರಿಯಿಂದ ಅನುಮತಿ ಪಡೆಯಲಿದ್ದಾರೆ. ಯೋಜನೆಯ ವೆಚ್ಚದಲ್ಲಿ ಸಾಕಷ್ಟು ಬದಲಾವಣೆಯಾಗುವುದಿಲ್ಲ. ಭೂ ಸ್ವಾಧೀನವು ಕಡಿಮೆಯಾಗಲಿದೆ.

ಬಿಆರ್​​ಟಿಎಸ್ ಬಸ್ ನಿಲ್ದಾಣಗಳನ್ನು ಸ್ಥಳಾಂತರ ಮಾಡಲು ಸೂಚಿಸಿರುವುದಿಂದ ಯೋಜನೆ ಜಾರಿಗೆ ರಾಜ್ಯ ಸರ್ಕಾರ, ನಗರಾಭಿವೃದ್ಧಿ ಇಲಾಖೆ, ಸಾರಿಗೆ ಇಲಾಖೆಯಿಂದ ಅನುಮತಿ ದೊರಕಬೇಕಿದೆ. ಶಿಫಾರಸ್ಸಿನ ಅನ್ವಯ ಬದಲಾದ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ ಜನಪ್ರತಿನಿಧಿಗಳು, ಸಾರ್ವಜನಿಕರೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಯೋಜನೆ ಕುರಿತು ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸುವುದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ಲಾಭುರಾಮ್, ಧಾರವಾಡ ಐಐಟಿ ಡೀನ್ ಪ್ರೋ.ನಾಗೇಶ ಐಯ್ಯರ , ಡಿಆರ್​​ಎನ್ ಇನ್ಪಾಸ್ಟ್ರಕ್ಚರ್ ವ್ಯವಸ್ಥಾಪಕ ನಿರ್ದೇಶಕ ದಿನೇಶ್​​​ ನಾಯಕ್​​ , ರಾಷ್ಟ್ರೀಯ ಹೆದ್ದಾರಿಗಳ ವಲಯದ ಮುಖ್ಯ ಅಭಿಯಂತರ ವಿಜಯ್ ಕುಮಾರ್, ಅಧೀಕ್ಷಕ ಅಭಿಯಂತರ ವಸಂತನಾಯ್ಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಸಚಿವರು, ಶಾಸಕರು ಶಂಖ ಊದಿಕೊಂಡು ತಿರುಗುತ್ತಿದ್ದಾರೆ : ಹೆಚ್​​​ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.