ETV Bharat / state

ನೈಋತ್ಯ ರೈಲ್ವೆ ನಿಲ್ದಾಣದ ಆವರಣದಲ್ಲಿ ಕುಡುಕರು ಹಾವಳಿ!

author img

By

Published : May 28, 2020, 6:55 PM IST

ರೈಲ್ವೆ ನಿಲ್ದಾಣದ ಆವರಣವನ್ನೇ ಸಾರಾಯಿ ಸೇವನೆ ಅಡ್ಡೆ ಮಾಡಿಕೊಂಡಿರುವ ಕುಡುಕರು ಟಿಕೆಟ್ ಕೌಂಟರ್ ಮುಂದೆಯೇ ರಾಜಾರೋಷವಾಗಿ ಎಣ್ಣೆ ಹೊಡೆಯುತ್ತಾರೆ.

drinkers at Hubli railway station , ರೈಲ್ವೆ ನಿಲ್ದಾಣದ ಆವರಣದಲ್ಲಿ ಕುಡುಕರು ಹಾವಳಿ
ನೈಋತ್ಯ ರೈಲ್ವೇ ನಿಲ್ದಾಣದ ಆವರಣದಲ್ಲಿ ಕುಡುಕರು ಹಾವಳಿ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು.!

ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಆವರಣದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ನಿಲ್ದಾಣದ ಆವರಣದಲ್ಲಿಯೇ‌ ರಾಜಾರೋಷವಾಗಿ ಸಾರಾಯಿ ಸೇವನೆ ಮಾಡುತ್ತಿದ್ದಾರೆ.

ನಗರದ ರೈಲ್ವೆ ನಿಲ್ದಾಣದ ಅಂಡರ್ ಗ್ರೌಂಡ್ ಕಾಯ್ದಿರಿಸುವ ಟಿಕೆಟ್ ಕೌಂಟರ್ ಬಳಿ ಕುಡುಕರ ಹಾವಳಿ ಹೆಚ್ಚಾಗಿದೆ. ಹಗಲು ಹೊತ್ತಿನಲ್ಲಿಯೇ ರಾಜಾರೋಷವಾಗಿ ಮದ್ಯ ಸೇವಿಸುವ ಕುಡುಕರು ಎಲ್ಲೆಂದರಲ್ಲಿ ಸಾರಾಯಿ ಪ್ಯಾಕೆಟ್ ಎಸೆದು ಹೋಗುತ್ತಿದ್ದಾರೆ. ಇನ್ನೂ ರೈಲ್ವೆ ಭದ್ರತಾ ಸಿಬ್ಬಂದಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬುವಂತ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇನ್ನು ರಾಜಾರೋಷವಾಗಿ ಟಿಕೆಟ್ ಕೌಂಟರ್ ಮುಂದೆಯೇ ಮದ್ಯ ಸೇವನೆ ಮಾಡಿದ್ದರೂ ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ.

ಟಿಕೆಟ್ ಕೌಂಟರ್ ಮುಂದೆಯೇ ರಾಜಾರೋಶವಾಗಿ ಎಣ್ಣೆ ಹೊಡೆಯುತ್ತಿರುವ ಕುಡುಕರು

ರೈಲ್ವೆ ನಿಲ್ದಾಣದ ಆವರಣವನ್ನೇ ಸಾರಾಯಿ ಸೇವನೆ ಅಡ್ಡೆ ಮಾಡಿಕೊಂಡಿರುವ ಕುಡುಕರು ಟಿಕೆಟ್ ಕೌಂಟರ್ ಮುಂದೆಯೇ ರಾಜಾರೋಷವಾಗಿ ಎಣ್ಣೆ ಹೊಡೆಯುತ್ತಾರೆ. ಪೊಲೀಸರ ಭಯವೂ ಇಲ್ಲದಂತೆ ವರ್ತಿಸೋ ಕುಡುಕರ ನಡೆಯಿಂದ ಸಾರ್ವಜನಿಕರಿಗೆ ಕಿರಿ ಕಿರಿ ಉಂಟಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಂತಹ ಅವ್ಯವಸ್ಥೆಗೆ ಕಡಿವಾಣ ಹಾಕಿ ಕ್ರಮ ಕೈಗೊಳ್ಳಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.