ETV Bharat / state

ಉತ್ತಮ ಸಾಧನೆಗೆ ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ - Dharwad

ಎಸ್ಎಸ್ಎಲ್​ಸಿ ಫಲಿತಾಂಶದಲ್ಲಿ ಧಾರವಾಡ ಜಿಲ್ಲೆಯು ಉತ್ತಮ ಸಾಧನೆ ಮಾಡಲು ಅಗತ್ಯವಿರುವ ಮಾರ್ಗದರ್ಶಿ ಸರಳ ಸೂತ್ರಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೇ ಈಗಿನಿಂದಲೇ ಸರಳ ಸೂತ್ರಗಳನ್ನು ಅಳವಡಿಸಿಕೊಂಡರೆ ಉತ್ತೀರ್ಣರಾಗಲು ಸಾಧ್ಯವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

Dharwad
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
author img

By

Published : Feb 13, 2020, 7:24 PM IST

ಧಾರವಾಡ: ಈ ಬಾರಿಯ ಎಸ್ಎಸ್ಎಲ್​ಸಿ ಫಲಿತಾಂಶದಲ್ಲಿ ಧಾರವಾಡ ಜಿಲ್ಲೆಯು ಉತ್ತಮ ಸಾಧನೆ ಮಾಡಲು ಅಗತ್ಯವಿರುವ ಮಾರ್ಗದರ್ಶಿ ಸರಳ ಸೂತ್ರಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೇ ಈಗಿನಿಂದಲೇ ಸರಳ ಸೂತ್ರಗಳನ್ನು ಅಳವಡಿಸಿಕೊಂಡರೆ ಉತ್ತೀರ್ಣರಾಗಲು ಸಾಧ್ಯವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್​, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಾಲ್ಕೋ ಕಂಪನಿಯು ಸಿಎಸ್ಆರ್ ಚಟುವಟಿಕೆಯಡಿ ಎಸ್ಎಸ್ಎಲ್​ಸಿ ಫಲಿತಾಂಶ ಸುಧಾರಣೆಗಾಗಿ ರಚಿಸಿರುವ ಪಾಸಿಂಗ್ ಪ್ಯಾಕೇಜ್ ಮಾರ್ಗದರ್ಶಿ ಸೂತ್ರಗಳ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು‌ ಮಾತನಾಡಿದರು.

ನಾಲ್ಕೋ ಕಂಪನಿಯ 30 ಲಕ್ಷ ರೂ. ನೆರವಿನಿಂದ ಎಸ್ಎಸ್ಎಲ್​ಸಿ ಫಲಿತಾಂಶ ಸುಧಾರಣೆಗಾಗಿ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಲಾಗಿದೆ. ಪರೀಕ್ಷೆ ಸಮೀಪಿಸುತ್ತಿರುವ ಈ ದಿನಗಳಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗುವ ಭಯಕ್ಕೆ ಒಳಪಡಬಾರದು. ಆತ್ಮವಿಶ್ವಾಸ ಗಳಿಸಿಕೊಂಡು, ಸರಳ ಸೂತ್ರ ಪಾಲಿಸಿ ಉತ್ತೀರ್ಣರಾಗಲು ಇನ್ನೂ ಕಾಲಾವಕಾಶವಿದೆ. ಎಲ್ಲಾ ಪ್ರಯತ್ನಗಳ ನಂತರವೂ ನಿರೀಕ್ಷಿತ ಫಲಿತಾಂಶ ಬರದಿದ್ದರೆ ಮಕ್ಕಳು ಧೃತಿಗೆಡಬಾರದು, ಮರಳಿ ಯತ್ನವ ಮಾಡು ಎಂಬಂತೆ ಮತ್ತೆ ಓದಿ ಪರೀಕ್ಷೆಗಳನ್ನು ಎದುರಿಸಬೇಕು. ಪರೀಕ್ಷೆಗೆ ಇನ್ನೂ ಸುಮಾರು 40 ದಿನಗಳ ಕಾಲಾವಕಾಶವಿದೆ. ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣ ದೂರ ಇರಿ ಎಂದು ಸಲಹೆ ನೀಡಿದರು.

40 ದಿನಗಳಲ್ಲಿ ಪಠ್ಯಕ್ರಮ ಮನನ ಮಾಡಿಕೊಳ್ಳುವ ವಿವಿಧ ವಿಷಯಗಳು, ಚಾರ್ಟುಗಳು, ಮಾರ್ಗದರ್ಶಿ ಸೂತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಲ್.ಹಂಚಾಟೆ, ಶಿಕ್ಷಣಾಧಿಕಾರಿ ಎಸ್.ಎನ್.ಹುಗ್ಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ, ಎ.ಎ.ಖಾಜಿ ಅಧಿಕಾರಿಗಳು ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.