ETV Bharat / state

ಕೋವಿಡ್ 2ನೇ ಅಲೆಗೆ ಸಂಕಷ್ಟದಲ್ಲಿ ಹುಬ್ಬಳ್ಳಿ-ಧಾರವಾಡದ ವ್ಯಾಪಾರಸ್ಥರು

author img

By

Published : Apr 28, 2021, 10:27 AM IST

ಕೊರೊನಾ ಮೊದಲನೇ ಅಲೆಯಿಂದ ಚೇತರಿಸಿಕೊಳ್ಳುತ್ತಿದ್ದ ಜನರಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಎರಡನೇ ಅಲೆಯ ಭೀತಿಯಿಂದಾಗಿ ಅವಳಿ ನಗರದ ವ್ಯಾಪಾರ ವಹಿವಾಟು ಮತ್ತೆ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ.

covid effects on hubli darwada petty business
ಕೋವಿಡ್ 2ನೇ ಅಲೆಗೆ ಹುಬ್ಬಳ್ಳಿ-ಧಾರವಾಡದ ವ್ಯಾಪಾರ-ವಹಿವಾಟು ತತ್ತರ!

ಹುಬ್ಬಳ್ಳಿ: ಕೋವಿಡ್​​​ ಎರಡನೇ ಅಲೆ ಹೊಡೆತಕ್ಕೆ ಹುಬ್ಬಳ್ಳಿ-ಧಾರವಾಡ ವ್ಯಾಪಾರಸ್ಥರು ಕಂಗಾಲಾಗಿ ಹೋಗಿದ್ದಾರೆ. ಹೌದು, ಕೋವಿಡ್​​ ಎರಡನೇ ಅಲೆ ಭಾರಿ ಹೊಡೆತ ನೀಡಿದೆ. ಇನ್ನೇನು ಕೊರೊನಾ ಮಾರಿ ಹೋಯಿತು ಎಂದು ನಿಟ್ಟುಸಿರು ಬಿಡುವ ಮುನ್ನವೇ ಕೋವಿಡ್ ಎರಡನೇ ಅಲೆ ಅರ್ಭಟ ಆರಂಭವಾಗಿ ವ್ಯಾಪಾರೋದ್ಯಮವನ್ನು ನಡುಗಿಸಿದೆ.‌

ಎರಡನೇ ಅಲೆಯ ಭೀತಿಯಿಂದಾಗಿ ವ್ಯಾಪಾರ ವಹಿವಾಟು ಮತ್ತೆ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ. ಈಗಾಗಲೇ ಮೊದಲ ಹಂತದ ಕೊರೊನಾ ಹೊಡೆತಕ್ಕೆ ನೆಲಕಚ್ಚಿದ್ದ ವ್ಯಾಪಾರೋದ್ಯಮ ಹಂತ ಹಂತವಾಗಿ ಚೇತರಿಕೆ ಕಂಡರೂ ಸಂಪೂರ್ಣ ಸುಧಾರಿಸಿಕೊಳ್ಳುವ ಸಮಯದಲ್ಲಿ ಎರಡನೇ ಅಲೆ ಶಾಕ್​ ನೀಡಿದೆ. ಅದರಲ್ಲೂ ಬಟ್ಟೆ ಅಂಗಡಿಗಳು, ಆಭರಣ ಅಂಗಡಿಗಳು, ಟೈಲರಿಂಗ್ ಶಾಪ್​ಗಳು, ಹೋಟೆಲ್‌ಗಳು, ಜೆರಾಕ್ಸ್ ಕೇಂದ್ರಗಳು, ಆಟಿಕೆ ಅಂಗಡಿಗಳು, ಬೇಕರಿಗಳು, ಟೈಲರ್‌ಗಳು ಮುಂತಾದ ಅಂಗಡಿಗಳಿಗೆ ಬೀಗ ಬಿದ್ದಿದೆ.

ಕೋವಿಡ್ 2ನೇ ಅಲೆಗೆ ಹುಬ್ಬಳ್ಳಿ-ಧಾರವಾಡದ ವ್ಯಾಪಾರ ವಹಿವಾಟು ತತ್ತರ!

ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದ್ದರಿಂದ ಬಾಗಿಲು ಹಾಕಲಾಗಿದೆ. ಅದರಲ್ಲೂ ಈಗ ಮದುವೆ ಸೀಸನ್ ಆಗಿದ್ದು, ಅತಿ ಹೆಚ್ಚು ಜವಳಿ ಹಾಗೂ ಬಂಗಾರದ ಆಭರಣಗಳ ಅಂಗಡಿಗಳು ಗ್ರಾಹಕರಿಂದ ತುಂಬಿಕೊಳ್ಳುತ್ತಿದ್ದವು. ಆದ್ರೀಗ ಕೊರೊನಾ ಕಾರಣ ಅದಕ್ಕೆ ಅವಕಾಶವಿಲ್ಲ. ‌ಹೀಗಾಗಿ ಅಂಗಡಿಗಳಿಗೆ ಬೀಗ ಹಾಕಲಾಗಿದ್ದು, ಮಾಲೀಕರು ಅಂಗಡಿ ಬಾಡಿಗೆ ಕಟ್ಟುವುದು ಕಷ್ಟವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಕೊರೊನಾ ನಿತ್ಯ ಉಲ್ಬಣಗೊಳುತ್ತಿರುವುದರಿಂದ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ನೆಲಕಚ್ಚಿದೆ. ಮದುವೆ ಸೀಸನ್ ಇರುವುದರಿಂದ ಬಟ್ಟೆ ಹಾಗೂ ಬಂಗಾರದ ಅಂಗಡಿಗಳು ಮುಚ್ಚಿದ್ದರಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ವಧು-ವರನಿಗೆ ಬಟ್ಟೆ ಹಾಗೂ ಬಂಗಾರದ ಆಭರಣ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಅಗತ್ಯ ವಸ್ತುಗಳಿಗೆ ಬೆಳಗ್ಗೆ 6ರಿಂದ 10 ಗಂಟೆವರೆಗೆ ಅವಕಾಶ ನೀಡಿದಂತೆ ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಇದನ್ನೂ ಓದಿ: ಮಂಗಳೂರು: ಸಣ್ಣಪುಟ್ಟ ವ್ಯಾಪಾರಸ್ಥರ ಮೇಲೆ ಕೋವಿಡ್​ ಪರಿಣಾಮ

ಕೊರೊನಾದಿಂದ ವ್ಯಾಪಾರದ ಮೇಲೆ ದುಷ್ಪರಿಣಾಮ ಬೀರಿದೆ. ಬೆಲೆ ಹೆಚ್ಚಳ ಹಾಗೂ ಭಯದ ವಾತಾವರಣ ಜನರಲ್ಲಿ ಕಾಡುತ್ತಿದೆ. ಕಳೆದ ಬಾರಿಗಿಂತಲೂ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿದ್ದು, ಇದರಿಂದ ಮೇಲೆಳಲು ಸಾಧ್ಯವಿಲ್ಲದ ಸ್ಥಿತಿ‌ ನಿರ್ಮಾಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.