ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ವಾಸೀಂ ಪಠಾಣ್‌ನನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆತನಿಗೆ ಯಾರೂ ಕೂಡಾ ಜಾಮೀನು ನೀಡಲು ಮುಂದಾಗಿಲ್ಲ. ದೇಶದ್ರೋಹ ಮಾಡಿದವನ ಪರವಾಗಿ ಯಾರೂ ಕೂಡ ವಕಾಲತ್ತು ವಹಿಸದೇ ಇರುವುದು ನಿಜಕ್ಕೂ ಖುಷಿ ವಿಷಯ ಎಂದು ಹುಬ್ಬಳ್ಳಿಯ ಹಿರಿಯ ನ್ಯಾಯವಾದಿ ಅಶೋಕ್ ಅಣ್ವೇಕರ್ ಹೇಳಿದರು.
ಹಿಂಸಾಚಾರ ಪ್ರಕರಣದ ಮಾಸ್ಟರ್ ಮೈಂಡ್ ವಾಸೀಂ ಪಠಾಣ್‌ನನ್ನು ಪೊಲೀಸ್ ಕಸ್ಟಡಿಗೆ ಆದೇಶಿಸಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹುಬ್ಬಳ್ಳಿ ನಗರದಲ್ಲಿ ಇಂತಹ ಘಟನೆಗೆ ಪ್ರಚೋದನೆ ನೀಡಿದ್ದು ತಪ್ಪು. ಈತನ ಹಿಂದೆ ಯಾರು ಯಾರಿದ್ದಾರೆ ಅನ್ನೋದರ ಬಗ್ಗೆ ತನಿಖೆ ನಡೆಯಲಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದರು.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ವಾಸೀಂ ಪಠಾಣ್ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ
ಇನ್ನು ಗಲಭೆಗೆ ಕಾರಣವಾದ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ ವಿದ್ಯಾರ್ಥಿಗೆ ಜಾಮೀನು ಪರವಾಗಿ ಕೋರ್ಟ್‌ನಲ್ಲಿ ವಾದ ಮಾಡಲಾಗಿತ್ತು. ಆದರೆ ನಮ್ಮ ಅರ್ಜಿ ವಜಾ ಆಗಿದೆ. ನಾಲ್ಕನೇ ಜೆ.ಎಂ.ಎಫ್.ಸಿ ನ್ಯಾಯಾಧೀಶರ ಆದೇಶ ಪ್ರಶ್ನಿಸಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತೇವೆ ಎಂದು ವಕೀಲ ಸಂಜಯ ಬಡಾಸ್ಕರ್ ಹೇಳಿದರು.
ಇದನ್ನೂ ಓದಿ: ಪೊಲೀಸ್ ಬಂದೋಬಸ್ತ್ನಲ್ಲಿ ಪರೀಕ್ಷೆ ಬರೆದು ಕಾರಾಗೃಹಕ್ಕೆ ತೆರಳಿದ ಆರೋಪಿ