ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ಝೀರೋ ಹಂತಕ್ಕೆ ಬಂದು ತಲುಪಿತ್ತು. ಆದರೆ, ಹೊರಗಿನಿಂದ ಬಂದವರಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ಕಳವಳ ವ್ಯಕ್ತಪಡಿಸಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕೊರೊನಾ ಪೀಡಿತರ ಪೈಕಿ ಬಹುತೇಕರ ಆರೋಗ್ಯ ಸ್ಥಿರವಾಗಿದೆ. ಕೊರೊನಾ ಎಲ್ಲರಿಗೂ ಒಂದು ಹೊಸ ಅನುಭವ. ಈ ಕೊರೊನಾ ಒಂದು ತಿಂಗಳು, ಎರಡು ತಿಂಗಳಿಗೆ ಮುಗಿಯುವುದಲ್ಲ. ಇದು ನಿರಂತರವಾಗಿ ಇರುವಂತಹದ್ದು. ಪಾಸಿಟಿವ್, ನೆಗೆಟಿವ್, ಡಿಸ್ಚಾರ್ಜ್ ಅನ್ನೋದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎಂದರು.
ಅದಕ್ಕಾಗಿಯೇ ಆರ್ಥಿಕತೆಗಾಗಿ ಹಂತ ಹಂತವಾಗಿ ರಿಲ್ಯಾಕ್ಷ್ ಮಾಡುತ್ತಿದ್ದೇವೆ. ಜನರೇ ಇನ್ನು ಸ್ವಯಂ ಪ್ರೇರಿತವಾಗಿ ಜಾಗೃತರಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನವನ್ನು ಜನರು ಪಾಲನೆ ಮಾಡಬೇಕು. ಲಾಕ್ಡೌನ್ ರಿಲ್ಯಾಕ್ಸ್ ಮಾಡಿದ ಬಳಿಕ ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.