ETV Bharat / state

ಹುಬ್ಬಳ್ಳಿ-ಧಾರವಾಡ ಸ್ವಚ್ಛತೆಗೆ ಪಣ; ಐಷಾರಾಮಿ ಶೌಚಾಲಯದ ಜೊತೆ 18 ಮೂತ್ರಾಲಯ ನಿರ್ಮಾಣ

author img

By ETV Bharat Karnataka Team

Published : Dec 30, 2023, 2:49 PM IST

ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯು ಸ್ವಚ್ಛ ಭಾರತ್​ ಮಿಷನ್‌ 2.0 ಯೋಜನೆಯಡಿ ಒಂದು ಐಷಾರಾಮಿ ಸಾರ್ವಜನಿಕ ಶೌಚಾಲಯ ಹಾಗೂ 18 ಸಾರ್ವಜನಿಕ ಮೂತ್ರಾಲಯಗಳ ನಿರ್ಮಾಣಕ್ಕೆ ಮುಂದಾಗಿದೆ.

hubli dharwad
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ
ಐಷಾರಾಮಿ ಶೌಚಾಲಯ ನಿರ್ಮಾಣದ ಕುರಿತು ಮಾಹಿತಿ ನೀಡಿದ ಈಶ್ವರ ಉಳ್ಳಾಗಡ್ಡಿ

ಹುಬ್ಬಳ್ಳಿ : ಹುಬ್ಬಳ್ಳಿ - ಧಾರವಾಡ ಮಹಾನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅವಳಿ‌ನಗರದ ಸ್ವಚ್ಛತೆ ಹಾಗೂ ನೈರ್ಮಲೀಕರಣ ಮಹಾನಗರಕ್ಕೆ ದೊಡ್ಡ ಸವಾಲಾಗಿದ್ದು, ಇದಕ್ಕೆ ಮುಕ್ತಿ ನೀಡಲು ಪಾಲಿಕೆ ದಿಟ್ಟ ನಿರ್ಧಾರ ಕೈಗೊಂಡಿದೆ.

ಸಾರ್ವಜನಿಕರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸ್ವಚ್ಛ ಭಾರತ್​ ಮಿಷನ್‌ 2.0 ಯೋಜನೆಯಡಿ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಐಷಾರಾಮಿ (ಆಕಾಂಕ್ಷಿ ಶೌಚಾಲಯ) ಸಾರ್ವಜನಿಕ ಶೌಚಾಲಯ ಹಾಗೂ 18 ಸಾರ್ವಜನಿಕ ಮೂತ್ರಾಲಯಗಳ ನಿರ್ಮಾಣಕ್ಕೆ ಕೈಹಾಕಿದೆ.

ಈ ಸಂಬಂಧ ಈಗಾಗಲೇ 81.08 ಲಕ್ಷ ರೂ. ಟೆಂಡರ್‌ ಕರೆಯಲಾಗಿದೆ.‌ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಮಹಾನಗರ ಪಾಲಿಕೆ ಅನುದಾನದಲ್ಲಿ ಈ ಶೌಚಾಲಯ ಹಾಗೂ ಮೂತ್ರಾಲಯ ನಿರ್ಮಾಣವಾಗಲಿವೆ. ಧಾರವಾಡದ ಮೀನು ಮಾರುಕಟ್ಟೆ ಬಳಿ ಐಷಾರಾಮಿ ಶೌಚಾಲಯ ನಿರ್ಮಿಸಲು ಸ್ಥಳ ನಿಗದಿಪಡಿಸಲಾಗಿದೆ. ಮೂತ್ರಾಲಯವನ್ನು ಯಾವ್ಯಾವ ಸ್ಥಳದಲ್ಲಿ ನಿರ್ಮಿಸಬೇಕು ಎನ್ನುವ ಕುರಿತು ಪಾಲಿಕೆ ಅಧಿಕಾರಿಗಳು ಸಮೀಕ್ಷೆ ನಡೆಸಿ 11 ಸ್ಥಳಗಳನ್ನು ಅಂತಿಮಗೊಳಿಸಿದ್ದಾರೆ. ಸಾರ್ವಜನಿಕ ಮೂತ್ರಾಲಯಗಳಿಲ್ಲದ, ಸಾರ್ವಜನಿಕರಿಗೆ ಅನುಕೂಲವಾಗುವ ಧಾರವಾಡದ ಏಳು ಹಾಗೂ ಹುಬ್ಬಳ್ಳಿಯ 11 ಸ್ಥಳಗಳನ್ನು ಗುರುತಿಸಿ ಅಂದಾಜು ಪಟ್ಟಿ ಸಿದ್ಧಪಡಿಸಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗ : ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಚತೆ; ಮುಖ್ಯ ಶಿಕ್ಷಕ ಅಮಾನತು

ಇನ್ನು ಐಷಾರಾಮಿ ಶೌಚಾಲಯ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಇತರೆ ಶೌಚಾಲಯಗಳಿಂದ ವಿಭಿನ್ನವಾಗಿರಲಿದೆ. ಸ್ನಾನದ ಗೃಹಗಳು, ಟಚ್‌ಲೆಸ್ ಫ್ಲಶಿಂಗ್, ಸ್ತನಪಾನ ಕೊಠಡಿಗಳು ಮತ್ತು ಸ್ವಯಂಚಾಲಿತ ಸ್ಯಾನಿಟರಿ ನ್ಯಾಪ್‌ಕಿನ್ ಇನ್ಸಿನರೇಟರ್‌ ಯಂತ್ರ, ವ್ಹೀಲಿಂಗ್​ ಚೇರ್‌ ಒಳಗೊಂಡಿರಲಿದೆ. ಸ್ವಚ್ಛ ಭಾರತ್ ಮಿಷನ್ 2.0 ಭಾಗವಾಗಿ 2022ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಈ ಯೋಜನೆ ಆರಂಭಿಸಿತ್ತು. ನಗರಗಳನ್ನು ಬಯಲು ಶೌಚ ಮುಕ್ತಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಹುಬ್ಬಳ್ಳಿ - ಧಾರಾವಾಡ ಮಹಾನಗರ ಪಾಲಿಕೆ‌ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಇನ್ನೂ ಸುಧಾರಿಸದ ಬಯಲು ಬಹಿರ್ದೆಸೆ : ಲೋಕಾಯುಕ್ತ ನ್ಯಾಯಮೂರ್ತಿ ಪಾಟೀಲ್ ಅಸಮಾಧಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.