ETV Bharat / state

ಅಮಾನತುಗೊಂಡರೂ ಕರ್ತವ್ಯ ನಿರ್ವಹಿಸಿದ ಅಧಿಕಾರಿ: ಜಿಪಂ ಸಿಇಒ ವಿರುದ್ಧ ದೂರು - Dharwad latest update news

ಜಿಪಂ ಸಿಇಒ ಸುಶೀಲಾ ಅವರು, ಮನೋಹರ ಅಮಾನತುಗೊಂಡರು 17 ದಿನಗಳ ನಂತರ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ. ಸರ್ಕಾರದ ಆದೇಶಕ್ಕೆ‌ ಕ್ಯಾರೆ ಎನ್ನದ ಸಿಇಒ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನಿವೃತ್ತ ಅಧಿಕಾರಿ ವೈ.ಡಿ.ಕುನ್ನಿಬಾವಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

Dharwad
ಮನೋಹರ ಮಂಡೋಲಿ ಹಾಗೂ ಜಿಪಂ ಸಿಇಓ ಸುಶೀಲಾ
author img

By

Published : Mar 16, 2021, 5:08 PM IST

ಧಾರವಾಡ: ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಬಲೆಗೆ ಬಿದ್ದು ಅಮಾನತುಗೊಂಡ ಪಂಚಾಯತ್ ರಾಜ್ ಕಾರ್ಯನಿರ್ವಾಹಕ ಎಂಜಿನಿಯರ್ ಮನೋಹರ ಮಂಡೋಲಿ ಎಂಬುವರಿಂದ ಜಿಪಂ ಸಿಇಒ 17 ದಿನ ಕೆಲಸ‌ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

2020ರ ನವೆಂಬರ್ ತಿಂಗಳಲ್ಲಿ ಮನೋಹರ ಎಂಬುವವರು ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ಖೆಡ್ಡಾಕ್ಕೆ ಕೆಡವಿದ್ದರು. ಲೈಸೆನ್ಸ್ ನವೀಕರಣಕ್ಕೆ ಮನೋಹರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಪಡೆಯುವ ವೇಳೆ ಎಸಿಬಿ ದಾಳಿ ನಡೆಸಿತ್ತು. ಈ ಆರೋಪದ ಪ್ರಕರಣದಲ್ಲಿ ಫೆ. 17ರಂದು ಸರ್ಕಾರ ಮನೋಹರ ಮಂಡೋಲಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಿ‌ ಆದೇಶಿಸಿತ್ತು.

dharwad
ದೂರು ಪ್ರತಿ
dharwad
ದೂರು ಪ್ರತಿ

ಆದರೆ, ಜಿಪಂ ಸಿಇಒ ಸುಶೀಲಾ ಅವರು, ಮನೋಹರ ಅಮಾನತುಗೊಂಡರು 17 ದಿನಗಳ ನಂತರ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ. 17 ದಿನಗಳಲ್ಲಿ ಮನೋಹರ ಅನೇಕ ಬಿಲ್​​ಗಳಿಗೆ ಸಹಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರದ ಆದೇಶಕ್ಕೆ‌ ಕ್ಯಾರೆ ಎನ್ನದ ಸಿಇಒ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನಿವೃತ್ತ ಅಧಿಕಾರಿ ವೈ.ಡಿ.ಕುನ್ನಿಬಾವಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.