ETV Bharat / state

ವಿಧಾನಸಭೆ ಚುನಾವಣೆ: ಹು-ಧಾ ಕಮೀಷನರ್​ರಿಂದ ರೌಡಿಗಳ ಪರೇಡ್, ಬಾಲ ಬಿಚ್ಚದಂತೆ ಖಡಕ್ ಎಚ್ಚರಿಕೆ

author img

By

Published : Feb 23, 2023, 2:32 PM IST

ಹುಬ್ಬಳ್ಳಿ-ಧಾರವಾಡದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣ- ರೌಡಿಗಳ ನಿಯಂತ್ರಣಕ್ಕೆ ಖುದ್ದಾಗಿ ಫೀಲ್ಡ್​ಗಿಳಿದ ಪೊಲೀಸ್​ ಅಧಿಕಾರಿಗಳು​ - ಖಡಕ್ ಎಚ್ಚರಿಕೆ

police warning
ರೌಡಿಗಳಿಗೆ ಎಚ್ಚರಿಕೆ ನೀಡುತ್ತಿರುವ ಪೊಲೀಸರು

ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕ್ರೈಂ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹೀಗಾಗಿ ಕ್ರೈಂ ಕಂಟ್ರೋಲ್ ಗೆ ಹು-ಧಾ ಪೊಲೀಸ್ ಕಮೀಷನರೇಟ್ ಮುಂದಾಗಿದೆ. ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ ವ್ಯಾಪ್ತಿಯಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲು ಸಜ್ಜಾಗಿದೆ. ಅವಳಿನಗರದಲ್ಲಿ ಕಳೆದ 2 ವರ್ಷದಲ್ಲಿ ಅಂದಾಜು 20 ಕೊಲೆ, 80 ಕೊಲೆಗೆ ಯತ್ನ ಪ್ರಕರಣ ನಡೆದಿವೆ.

ಪೊಲೀಸ್ ಕಮೀಷನರೇಟ್ ರೌಡಿ ಪರೇಡ್; ಜನರು ಆತಂಕದಲ್ಲಿಯೇ ಜೀವನ ನಡೆಸುವಂತಾಗಿದೆ. ಸಾಮಾನ್ಯ ಜನರು ಕೊಲೆ ಪ್ರಕರಣದಲ್ಲಿ ಭಾಗಿಯಾಗುತ್ತಿರುವುದು ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದೆ. ಆಸ್ತಿ-ವಿಚಾರ, ವೈಯಕ್ತಿಕ ದ್ವೇಷ, ಕೌಟುಂಬಿಕ ಕಲಹ, ಪ್ರೀತಿ, ಪ್ರೇಮ ಸೇರಿದಂತೆ ಕ್ಷುಲ್ಲಕ ಕಾರಣಕ್ಕೆ ಕೊಲೆ, ಕೊಲೆ ಯತ್ನ ಪ್ರಕರಣಗಳು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹೆಚ್ಚುತ್ತಲೇ ಇವೆ. ಈ ನಿಟ್ಟಿನಲ್ಲಿ ಈಗ ಪೊಲೀಸ್ ಕಮೀಷನರೇಟ್ ರೌಡಿ ಪರೇಡ್ ಮೂಲಕ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲು ಮುಂದಾಗಿದೆ. ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ರೌಡಿಶೀಟರ್ ಗಳಿಗೆ ಪರೇಡ್ ನಡೆಸಿ ಎಚ್ಚರಿಕೆ ನೀಡಲಾಗಿದೆ.

police warning
ರೌಡಿಗಳಿಗೆ ಎಚ್ಚರಿಕೆ ನೀಡುತ್ತಿರುವ ಪೊಲೀಸರು

ಪೋಷಕರೇ ಮಕ್ಕಳು ದಾರಿ ತಪ್ಪಿದರೂ ಸುಮ್ಮನಿರುವುದು ಮೂಲ ಕಾರಣ; ಇನ್ನು, ಹೆಚ್ಚುತ್ತಿರುವ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಿಂದ ವಾಣಿಜ್ಯ ನಗರಿಯಲ್ಲಿ ಸಾರ್ವಜನಿಕರಿಗೆ ಅಭದ್ರತೆ ಕಾಡುತ್ತಿದೆ.‌ ಇತ್ತೀಚೆಗೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಯುವಕರೇ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ ಎಂಬುವಂತ ಮಾಹಿತಿ ಹುಬ್ಬಳ್ಳಿ ಜನರಲ್ಲಿ ಆತಂಕ ಸೃಷ್ಟಿಸಿದೆ. ಮಕ್ಕಳು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಬೇಕಾದ ಪೋಷಕರೇ ಮಕ್ಕಳು ದಾರಿ ತಪ್ಪಿದರೂ ಸುಮ್ಮನಿರುವುದು ಮೂಲ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.‌ ಮದ್ಯ ವ್ಯಸನಿ, ಸಿಗರೇಟ್ ಹಾಗೂ ಗುಟ್ಕಾ ಕೊಡಿಸುವ ವಿಚಾರವಾಗಿ ಕಳೆದ ಆರು ತಿಂಗಳಲ್ಲಿ 8 ಕೊಲೆಗಳಾಗಿವೆ.‌ ಇನ್ನೂ ಕುಟುಂಬ ಕಲಹ, ಪ್ರೀತಿ-ಪ್ರೇಮ ಹಾಗೂ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಲ್ಲಿ ಐದು ಕೊಲೆ ಪ್ರಕರಣಗಳು ದಾಖಲಾಗಿವೆ.‌ ಸಣ್ಣಪುಟ್ಟ ವಿಚಾರಕ್ಕೂ ಸಹ ಕೊಲೆ ನಡೆಯುತ್ತಿದೆ.

ಇನ್ನು, ವಿಧಾನಸಭೆ ಚುನಾವಣೆ ಹತ್ತಿರವಿರುವದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದೆ. ರೌಡಿಶೀಟರ್ ಗಳನ್ನು ಪರೇಡ್ ನಡೆಸುವ ಮೂಲಕ ಅಪರಾಧ ಪ್ರಕರಣಗಳನ್ನು ನಿಯಂತ್ರಣ ಮಾಡುವ ಕೆಲಸಕ್ಕೆ ಕೈ ಹಾಕಿದ್ದು, ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ತಗೆದುಕೊಳ್ಳುವದಾಗಿ ಪೊಲೀಸ್ ಆಯುಕ್ತ ರಮಣ್ ಗುಪ್ತ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಾರ್ಪೆಂಟರ್​ ಅಡ್ಡಗಟ್ಟಿ ಕತ್ತುಕೊಯ್ದು ದುಷ್ಕರ್ಮಿಗಳು ಪರಾರಿ.. ಚುರುಕುಗೊಂಡ ತನಿಖೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.