ಹುಬ್ಬಳ್ಳಿ: ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಆಪ್ತರಾದ ಮಾಜಿ ಸಚಿವ ಸಂತೋಷ ಲಾಡ್ ಮತ್ತು ಡಿಕೆ ಶಿವಕುಮಾರ್ ಆಪ್ತರಾದ ಮಾಜಿ ಪರಿಷತ್ ಸದಸ್ಯ ನಾಗರಾಜ್ ಛಬ್ಬಿ ನಡುವೆ ಟಿಕೆಟ್ಗಾಗಿ ಪೈಪೋಟಿ ನಡೆಯುತ್ತಿದೆ.
ಜೂನ್ 12 ರಂದು ಗುರುನಾಥ ದಾನವೇನವರ ಅವರನ್ನ ಕಲಘಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಡಿಕೆಶಿ ನೇಮಕ ಮಾಡಿದ್ದರು. ಡಿಕೆ ಶಿವಕುಮಾರ್ ಮೂಲಕ ದಾನವೇನವರಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಕಟ್ಟುವಲ್ಲಿ ನಾಗರಾಜ್ ಛಬ್ಬಿ ಯಶಸ್ವಿಯಾಗಿದ್ರು. ಸಂತೋಷ ಲಾಡ್ ಬಲಗೈ ಬಂಟ ಮಂಜುನಾಥ ಮುರಳ್ಳಿಯನ್ನ ಅಧ್ಯಕ್ಷ ಸ್ಥಾನದಿಂದ ತೆಗೆಯಲಾಗಿತ್ತು. ಇದರಿಂದ ಸಂತೋಷ ಲಾಡ್ಗೆ ಭಾರಿ ಮುಖಭಂಗವಾಗಿತ್ತು.
ಈಗ ಮತ್ತೆ ಸಂತೋಷ್ ಲಾಡ್ ಮೇಲುಗೈ ಸಾಧಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಯನ್ನು ತಡೆ ಹಿಡಿಸುವಲ್ಲಿ ಸಂತೋಷ ಲಾಡ್ ಯಶಸ್ವಿಯಾಗಿದ್ದಾರೆ. ಸಂಡೂರಿಗೆ ಸಿದ್ದರಾಮಯ್ಯ ಬಂದು ಹೋಗುತ್ತಿದ್ದಂತೆ ಆದೇಶ ಹೊರಬಿದ್ದಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮೂಲಕ ಅಧ್ಯಕ್ಷರ ನೇಮಕಾತಿಗೆ ತಡೆ ತರಿಸುವಲ್ಲಿ ಯಶಸ್ವಿಯಾಗಿದ್ದು, ಸ್ಥಳಿಯ ಮಟ್ಟದಲ್ಲೂ ಸಿದ್ದರಾಮಯ್ಯ ಬಣ ಮೇಲುಗೈ ಸಾಧಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಓದಿ:SCO: ಪಾಕ್ ಮೂಲದ ಭಯೋತ್ಪಾದನೆ ಸಂಘಟನೆಗಳ ವಿರುದ್ಧ ಕ್ರಮಕ್ಕೆ ದೋವಲ್ ಆಗ್ರಹ