ಧಾರವಾಡ: ಧಾರವಾಡದ ಹೊರವಲಯದ ಸೃಷ್ಟಿ ತೋಟದಲ್ಲಿ ನಾಡೋಜ ಡಾ. ಚೆನ್ನವೀರ ಕಣವಿ ಅವರ ಪಾರ್ಥೀವ ಶರೀರಕ್ಕೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ ಸಕಲ ಗೌರವವನ್ನು ಸಮರ್ಪಿಸಿದರು.
ಅಂತ್ಯಕ್ರಿಯೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್,ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ್ ಭಾಗಿಯಾಗಿದ್ದರು. ಕಣವಿ ಅವರ ಪಾರ್ಥೀವ ಶರೀರಕ್ಕೆ ಹಿರಿಯ ಪುತ್ರ ಶಿವಾನಂದ ಅವರು ಪೂಜೆ ಸಲ್ಲಿಸಿದ್ದು, ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದೆ.
ಓದಿ: ದೇವಸ್ಥಾನಗಳಿಗೆ ಹೊರಡಿಸಿದ್ದ ಸುತ್ತೋಲೆ ವಾಪಸ್ : ಸಚಿವ ಆರಗ ಜ್ಞಾನೇಂದ್ರ