ETV Bharat / state

ಚಂದ್ರಶೇಖರ ಗುರೂಜಿ ಹತ್ಯೆ: ಶವಗಾರದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಸಿಬ್ಬಂದಿ, ಸಂಬಂಧಿಕರು - The staff and relatives crying in front of the mortuary

ಮಂಗಳವಾರ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿ ಅವರನ್ನು ಹತ್ಯೆ ಮಾಡಲಾಗಿದೆ. ಅವರ ಸಾವಿಗೆ ಭಕ್ತರು, ಸಂಬಂಧಿಕರು ಕಣ್ಣೀರು ಸುರಿಸುತ್ತಿದ್ದಾರೆ.

ಚಂದ್ರಶೇಖರ ಗುರೂಜಿ ಹತ್ಯೆ
ಚಂದ್ರಶೇಖರ ಗುರೂಜಿ ಹತ್ಯೆ
author img

By

Published : Jul 5, 2022, 9:07 PM IST

ಹುಬ್ಬಳ್ಳಿ: ನೂರಾರು ಯುವಕ ಹಾಗೂ ಯುವತಿಯರಿಗೆ ಕೆಲಸ ನೀಡಿ, ಅವರ ಕುಟುಂಬಕ್ಕೆ ಆಸರೆಯಾಗಿದ್ದ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿಯನ್ನು ಕೊಲೆ ಮಾಡಿರುವ ಸುದ್ದಿ ತಿಳಿಯುತ್ತಿದ್ದಂತೆಯೇ, ಹುಬ್ಬಳ್ಳಿಯ ಕಿಮ್ಸ್ ಶವಾಗಾರಕ್ಕೆ ಸಿಬ್ಬಂದಿ ಹಾಗೂ ಭಕ್ತರ ದಂಡು ಹರಿದು ಬರುತ್ತಿದೆ. ಅಲ್ಲದೇ ಸಂಬಂಧಿಕರ ಹಾಗೂ ಸಿಬ್ಬಂದಿ ಆಕ್ರಂದನ ಮುಗಿಲು ಮುಟ್ಟಿದೆ.

ಶವಗಾರದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಸಿಬ್ಬಂದಿ, ಸಂಬಂಧಿಕರು

ಮಂಗಳವಾರ ಮಧ್ಯಾಹ್ನದ ವೇಳೆಗೆ ಪ್ರೆಸಿಡೆಂಟ್ ಹೊಟೇಲ್​ನಲ್ಲಿ ಚಂದ್ರಶೇಖರ ಗುರೂಜಿ ಅವರ ಹತ್ಯೆ ಮಾಡಲಾಗಿತ್ತು. ಅವರು ಸರಳ ವಾಸ್ತು ಹೆಸರಿನಲ್ಲಿ ನೂರಾರು ಕುಟುಂಬಕ್ಕೆ ಆಧಾರವಾಗಿದ್ದರು. ಚಿಕ್ಕಪ್ಪನ ಮುಖ ನೋಡಲು ಶಿವಪುತ್ರಪ್ಪನವರ ಮಗ ಸಂಜಯ ಬಂದಿದ್ದರು. ಕುಟುಂಬದವರು ಹಾಗೂ ಸಿಬ್ಬಂದಿ ಸುರಿಯುತ್ತಿರುವ ಮಳೆಯಲ್ಲಿಯೇ ಅವರ ಮೃತದೇಹಕ್ಕಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ಗುರೂಜಿ ಕೊಲೆ ಕೇಸ್​ನಲ್ಲಿ ನಾಲ್ಕೇ ತಾಸಲ್ಲಿ ಆರೋಪಿಗಳನ್ನು ಬಂಧಿಸಿದ್ದೇವೆ: ಹು-ಧಾ ಪೊಲೀಸ್ ಆಯುಕ್ತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.