ETV Bharat / state

ಪ್ರವಾಹಕ್ಕೊಳಗಾದ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ: ಎಲ್ಲೆಲ್ಲೂ ನೋವಿನದ್ದೇ ಮಾತು! - ಕೇಂದ್ರ ಪ್ರವಾಹ ಅಧ್ಯಯನ ತಂಡ

ಕೇಂದ್ರ ಪ್ರವಾಹ ಅಧ್ಯಯನ ತಂಡ ಹುಬ್ಬಳ್ಳಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕೇಂದ್ರ ಪ್ರವಾಹ ಅಧ್ಯಯನ ತಂಡ
author img

By

Published : Aug 26, 2019, 7:31 PM IST

ಹುಬ್ಬಳ್ಳಿ: ಪ್ರವಾಹಪೀಡಿತ ಪ್ರದೇಶಗಳಲ್ಲಿ ಕೇಂದ್ರ ನೆರೆ ಅಧ್ಯಯನ ತಂಡ ಪರಿಶೀಲನೆಯಲ್ಲಿ ತೊಡಗಿದೆ. ಈ ತಂಡ ಇಂದು ಭಾರಿ ಹಾನಿಗೊಳಗಾದ ಧಾರವಾಡ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಕಾಶ, ಕೇಂದ್ರ ಹಣಕಾಸು ಸಚಿವಾಲಯದ ಲೆಕ್ಕಪತ್ರ ಶಾಖೆಯ ನಿರ್ದೇಶಕ ಎಸ್.ಸಿ.ಮೀನಾ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪುನ್ನುಸ್ವಾಮಿ, ಕೇಂದ್ರ ಜಲ ಸಂಪನ್ಮೂಲ ಪ್ರಾದೇಶಿಕ ಕಚೇರಿಯ ಅಧೀಕ್ಷಕ ಅಭಿಯಂತರ ಎಸ್.ಇ ಜಿತೇಂದ್ರ ಪನ್ವಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಾದೇಶಿಕ ಕಚೇರಿಯ ವಿಜಯಕುಮಾರ್ ಪ್ರದೇಶಗಳಿಗೆ ಭೇಟಿ ನೀಡಿದರು.

ಪ್ರವಾಹಕ್ಕೊಳಗಾದ ಪ್ರದೇಶಗಳಿಗೆ ಕೇಂದ್ರ ಪ್ರವಾಹ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು

ಹಾಗೆಯೇ ಗ್ರಾಮೀಣಾಭಿವೃದ್ದಿ ಸಚಿವಾಲಯದ ಉಪಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ ಹಾಗೂ ಇಂಧನ ಸಚಿವಾಲಯದ ಉಪನಿರ್ದೇಶಕ ಓ.ಪಿ.ಸುಮನ್ ಅವರನ್ನೊಳಗೊಂಡಿರುವ ತಂಡವು ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಬೆಣ್ಣೆಹಳ್ಳ ಪ್ರವಾಹದಿಂದ ಹಾನಿಯಾಗಿರುವ ಸೇತುವೆ, ಬದನೆ, ಹೆಸರು, ಮೆಕ್ಕೆಜೋಳ,ಉಳ್ಳಾಗಡ್ಡಿ, ಸೂರ್ಯಕಾಂತಿ, ಹತ್ತಿ ಬೆಳೆಗಳ ಹಾನಿಯನ್ನು ವೀಕ್ಷಿಸಿತು.

ಸುಮಾರು 900 ಹೆಕ್ಟೇರ್ ಜಮೀನು ಹಾಗೂ 63 ಮನೆಗಳು ಹಾನಿಯಾಗಿವೆ, ಇನ್ನೂ 43 ಅರ್ಜಿಗಳು ಬಂದಿರುವ ಬಗ್ಗೆ ಮಾಹಿತಿ ಪಡೆದರು.

Intro:ಹುಬ್ಬಳ್ಳಿ -03

ಕೇಂದ್ರ ಪ್ರವಾಹ ಅಧ್ಯಯನ ತಂಡವು ಇಂದು ಜಿಲ್ಲೆಯ ಪ್ರವಾಹದಿಂದ ಬಾಧಿತಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿತು.

ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಕಾಶ, ಕೇಂದ್ರ ಹಣಕಾಸು ಸಚಿವಾಲಯದ ಲೆಕ್ಕಪತ್ರ ಶಾಖೆಯ ನಿರ್ದೇಶಕ ಎಸ್.ಸಿ.ಮೀನಾ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪುನ್ನುಸ್ವಾಮಿ, ಕೇಂದ್ರ ಜಲ ಸಂಪನ್ಮೂಲದ ಪ್ರಾದೇಶಿಕ ಕಚೇರಿಯ ಅಧೀಕ್ಷಕ ಅಭಿಯಂತರ ಎಸ್.ಇ ಜಿತೇಂದ್ರ ಪನ್ವಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಾದೇಶಿಕ ಕಚೇರಿಯ ವಿಜಯಕುಮಾರ, ಗ್ರಾಮೀಣಾಭಿವೃದ್ದಿ ಸಚಿವಾಲಯದ ಉಪಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ ಹಾಗೂ ಇಂಧನ ಸಚಿವಾಲಯದ ಉಪನಿರ್ದೇಶಕ ಓ.ಪಿ.ಸುಮನ್ ಅವರನ್ನೊಳಗೊಂಡಿರುವ ತಂಡವು ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಬೆಣ್ಣೆಹಳ್ಳ ಪ್ರವಾಹದಿಂದ ಹಾನಿಯಾಗಿರುವ ಸೇತುವೆ, ಬದನೆ, ಹೆಸರು, ಮೆಕ್ಕೆಜೋಳ,ಉಳ್ಳಾಗಡ್ಡಿ, ಸೂರ್ಯಕಾಂತಿ, ಹತ್ತಿ ಬೆಳೆಗಳ ಹಾನಿಯನ್ನು ವೀಕ್ಷಿಸಿದರು.
ಸುಮಾರು 900 ಹೆಕ್ಟೇರ್ ಜಮೀನು ಹಾನಿಯಾಗಿದೆ,63 ಮನೆಗಳು ಹಾನಿಯಾಗಿವೆ, ಇನ್ನೂ 43 ಅರ್ಜಿಗಳು ಬಂದಿರುವ ಬಗ್ಗೆ ಮಾಹಿತಿ ಪಡೆದರು.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.