ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಕೊರೊನಾ ಬಾರದಿರಲಿ ಎಂದು ದೇವರ ಮೊರೆ ಹೋಗಿದ್ದಾರೆ.
ವಾರದ ಒಂದು ದಿನವನ್ನ ಬ್ಯಾಲ್ಯಾಳ ಗ್ರಾಮದ ದುರ್ಗಾದೇವಿ, ದ್ಯಾಮವ್ವ ದೇವಿ, ಮಾಯಮ್ಮ ಹಾಗೂ ಕಲ್ಮೇಶ್ವರ ದೇವರಿಗೆ ಮೀಸಲಿಟ್ಟು, ಕಟ್ಟುನಿಟ್ಟಾಗಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ತಮ್ಮ ಗ್ರಾಮಕ್ಕೆ ಕೊರೊನಾ ಸೋಂಕು ಹರಡದಂತೆ ಹಾಗೂ ದೇಶದಲ್ಲಿ ಸೋಂಕು ನಿಯಂತ್ರಣಕ್ಕೆ ಬರುವಂತೆ ಪ್ರಾರ್ಥಿಸುತ್ತಿದ್ದಾರೆ.
ಪ್ರತಿ ಮಂಗಳವಾರ ಗ್ರಾಮದಲ್ಲಿ ಕೃಷಿ ಚಟುವಟಿಕೆ ಸೇರಿದಂತೆ ಎಲ್ಲಾ ಕೆಲಸ ಕಾರ್ಯಗಳಿಗೆ ವಿರಾಮ ನೀಡಿ, ವಾರ ಆಚರಣೆ ಮಾಡಲಾಗುತ್ತದೆ. ಭಾನುವಾರ ಸಂಜೆ ಸಭೆ ನಡೆಸಿ, ಗ್ರಾಮಸ್ಥರು ಈ ತೀರ್ಮಾನ ಕೈಗೊಂಡಿದ್ದಾರೆ.