ETV Bharat / state

ಹುಟ್ಟೂರು ಭೇಟಿಯಲ್ಲೇ ಗೈರಾದ ಬಿಜೆಪಿ ನಾಯಕರು!.. ಒಬ್ಬಂಟಿಯಾದ್ರಾ ನೂತನ ಸಿಎಂ ಬೊಮ್ಮಾಯಿ? - ಧಾರವಾಡ ಪಶ್ಚಿಮ‌ ಶಾಸಕ ಅರವಿಂದ ಬೆಲ್ಲದ್

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಹುಟ್ಟೂರಿಗೆ ಭೇಟಿ ನೀಡಿದರು. ಈ ವೇಳೆ ತಮ್ಮ ತಂದೆ-ತಾಯಿ ಸಮಾಧಿಯ ಸ್ಥಳಕ್ಕೆ ಭೇಟಿ ನೀಡಿದ್ದರಲ್ಲದೆ, ಇಲ್ಲಿನ ಆರ್​ಎಸ್​ಎಸ್ ಕಚೇರಿಗೂ ತೆರಳಿದ್ದರು. ಆದರೆ ಬೊಮ್ಮಾಯಿ ಜೊತೆ ಧಾರವಾಡ ಜಿಲ್ಲೆಯ ಬಿಜೆಪಿ ನಾಯಕರು ಕಾಣಿಸಿಕೊಳ್ಳದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

cm-basavaraja-bommai
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Jul 29, 2021, 2:45 PM IST

ಹುಬ್ಬಳ್ಳಿ: ಸಿಎಂ ಆಗಿ ಅಧಿಕಾರ ಸ್ವೀಕರಿಸಿ ಹುಬ್ಬಳ್ಳಿಗೆ ಆಗಮಿಸಿದ ಬಸವರಾಜ ಬೊಮ್ಮಾಯಿ ಸ್ವಪಕ್ಷಿಯರ ಅಸಮಾಧಾನದಿಂದ ತವರು ಜಿಲ್ಲೆಯಲ್ಲಿಯೇ ಏಕಾಂಗಿಯಾಗಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಸಿಎಂ ಹುದ್ದೆಗೇರಿದ ಬಳಿಕ ಇದೇ ಮೊದಲ ಬಾರಿಗೆ ಹುಟ್ಟೂರಿಗೆ ಭೇಟಿ ನೀಡಿದ್ದ ಬೊಮ್ಮಾಯಿ ಆಗಮನದ ವೇಳೆ ಬಿಜೆಪಿ ಮುಖಂಡರು ಬಾರದೇ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ ಸಿಎಂ ಬೊಮ್ಮಾಯಿಯಿಂದ ಇಲ್ಲಿನ ನಾಯಕರು ಅಂತರ ಕಾಯ್ದುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಇತ್ತ ಸಿಎಂ ಜೊತೆಗೆ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಮಾತ್ರ ಕಾಣಿಸಿಕೊಂಡಿದ್ದಾರೆ. ಆದರೆ ಧಾರವಾಡ ಪಶ್ಚಿಮ‌ ಶಾಸಕ ಅರವಿಂದ ಬೆಲ್ಲದ್, ಕಲಘಟಗಿ ಶಾಸಕ ನಿಂಬಣ್ಣನವರ್, ಜಗದೀಶ್ ಶೆಟ್ಟರ್, ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಶಾಸಕ‌ ಶಂಕರ ಪಾಟೀಲ್ ಮುನೇನಕೊಪ್ಪ, ಪರಿಷತ್ ಸದಸ್ಯ ಎಸ್.ವಿ.ಸಂಕನೂರು, ಮಾಜಿ ಎಂಎಲ್​ಸಿ ಶಂಕರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ್ ಕುಂದಗೋಳಮಠ ಸೇರಿದಂತೆ ಜಿಲ್ಲೆಯ ಬಹುತೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಿಎಂ ಬೊಮ್ಮಾಯಿಯಿಂದ ದೂರ ಉಳಿದಿದ್ದರು.

ಬೊಮ್ಮಾಯಿ ಸಿಎಂ ಆಯ್ಕೆ ಆದಾಗಲು ವಿಜಯೋತ್ಸವದಲ್ಲಿ ಬಿಜೆಪಿ ಕಾರ್ಯಕರ್ತರು ಕಾಣಿಸಿಕೊಂಡಿರಲಿಲ್ಲ. ಕೇವಲ ಬೊಮ್ಮಾಯಿ ಅಭಿಮಾನಿಗಳು ಮಾತ್ರ ಸಂಭ್ರಮಾಚರಣೆ ಮಾಡಿದ್ದರು. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ, ಜೆಡಿಎಸ್ ನಾಯಕ ಹಾಗೂ ಸಭಾಪತಿ ಬಸವರಾಜ್ ಹೊರಟ್ಟಿ ಆಗಮಿಸಿ ಶುಭ ಕೋರಿದರು. ಇದಲ್ಲದೇ ಬೊಮ್ಮಾಯಿ ಅಭಿಮಾನಿಗಳು, ಶಿಗ್ಗಾಂವ - ಸವಣೂರು ಹಾಗೂ ಹಾವೇರಿ ಬಿಜೆಪಿ ಕಾರ್ಯಕರ್ತರಿಂದ ಸಿಎಂಗೆ ಸ್ವಾಗತ ಕೋರಲಾಯಿತೇ ವಿನಃ ಇಲ್ಲಿನ ಜನನಾಯಕರು ಮಾತ್ರ ಅಂತರ ಕಾಪಾಡಿಕೊಂಡಿದ್ದಾರೆ.

ಇದಲ್ಲದೇ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಬೆಂಬಲಿಗ ಬಿಜೆಪಿ ಕಾರ್ಯಕರ್ತರು, ಮುಖಂಡರು ಮಾತ್ರ ದೂರ ಉಳಿದಿದ್ದಾರೆ. ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವನಾಗಲು ಇಷ್ಟಪಡುವುದಿಲ್ಲ ಎಂದು ಜಗದೀಶ್​ ಶೆಟ್ಟರ್ ಹೇಳಿಕೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಸಿಎಂ ಬೊಮ್ಮಾಯಿ ಏಕಾಂಗಿಯಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಓದಿ: ತಂದೆ-ತಾಯಿ ಸಮಾಧಿಗೆ ಭೇಟಿ ನೀಡಿ ನಮನ: RSS ಕಚೇರಿಗೂ CM ಬೊಮ್ಮಾಯಿ Visit

ETV Bharat Logo

Copyright © 2024 Ushodaya Enterprises Pvt. Ltd., All Rights Reserved.