ಧಾರವಾಡ: ಬಣದೂರು ಮೀಸಲು ಅರಣ್ಯ ಪ್ರದೇಶದಲ್ಲಿ, ಕಾರ್ಯಾಚರಣೆ ನಡೆಸಿ ಮೂವರು ಬೇಟೆಗಾರರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಧಾರವಾಡ ತಾಲೂಕಿನ ಬಣದೂರಿನ ವಾಸುದೇವ ಮನಸೂರ, ರವಿ ಮನಸೂರು, ರೋಹಿತ್ ಮನಸೂರು ಬಂಧಿತರಾಗಿದ್ದು, ಬಂಧಿತರಿಂದ ಸಿಂಗಲ್ ಬ್ಯಾರಲ್ ಗನ್. ಕೊಯ್ತಾ, ಚಾಕು, ಬ್ಯಾಟರಿ, 2 ಬೈಕ್, 3 ಮೊಬೈಲ್ ಸೇರಿದಂತೆ 25 ಕೆಜಿ ಮಾಂಸ ವಶಕ್ಕೆ ಪಡೆದಕೊಳ್ಳಲಾಗಿದೆ.
ಬಣದೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೇಟೆಯಾಡುತ್ತಿದ್ದ ವೇಳೆ, ಅರಣ್ಯಾಧಿಕಾರಿ ಮಹೇಶಕುಮಾರ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ.