ETV Bharat / state

ಸಿಗದ ಸಚಿವ ಸ್ಥಾನ: ಬೆಲ್ಲದ್​ ಬೆಂಬಲಿಗರಿಂದ ಶೆಟ್ಟರ್, ಬಿಎಸ್​ವೈಗೆ ಧಿಕ್ಕಾರ, ಪ್ರತಿಭಟನೆ - Aravind Bellad supporters protest in hubballi

ಹುಬ್ಬಳ್ಳಿಯ ನವನಗರದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಬಿ.ಎಸ್.​ ಯಡಿಯೂರಪ್ಪ ಅವರ ಭಾವಚಿತ್ರ ಹಿಡಿದು ಶಾಸಕ ಅರವಿಂದ ಬೆಲ್ಲದ್ ಬೆಂಬಲಿಗರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

aravindha-bellada-supporters-protest-in-hubballi
ಅರವಿಂದ ಬೆಲ್ಲದ್ ಬೆಂಬಲಿಗರಿಂದ ಪ್ರತಿಭಟನೆ
author img

By

Published : Aug 4, 2021, 4:14 PM IST

ಹುಬ್ಬಳ್ಳಿ: ಶಾಸಕ ಅರವಿಂದ್​ ಬೆಲ್ಲದ್​ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಅವರ ಬೆಂಬಲಿಗರು ನಗರದ ವಿವಿಧೆಡೆ ಪ್ರತಿಭಟನೆ ನಡೆಸಿದರು.

ನವನಗರದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಬಿ.ಎಸ್​ ಯಡಿಯೂರಪ್ಪ ಅವರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಚೆನ್ನಮ್ಮ ವೃತ್ತದಲ್ಲಿ ಬೆಲ್ಲದ ಬೆಂಬಲಿಗರು ಅರವಿಂದ್​ ಬೆಲ್ಲದ್​ ಅವರ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿದರು. ನಂತರ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಅಭಿಮಾನಿ ಸೀಮಾ ಶೆಟ್ಟಿ ಮಾತನಾಡಿದರು. ಶಾಸಕ ಅರವಿಂದ್​ ಬೆಲ್ಲದ್​ ಅವರು ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಇವರು ಉತ್ತಮ ವ್ಯಕ್ತಿಯೂ ಹೌದು. ಆದರೆ, ಇವರಿಗೆ ಸಚಿವ ಸ್ಥಾನ ಮಾತ್ರ ಸಿಕ್ಕಿಲ್ಲ. ಇವರಿಗೆ ಸ್ಥಾನ ನೀಡದಿದ್ದಲ್ಲಿ ಖಂಡಿತವಾಗಿಯೂ ನಾವು ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ ಎಂದಿದ್ದಾರೆ.

ಓದಿ: ನಾನು ಮಾಡಿರುವ ತಪ್ಪಾದರೂ ಏನು.? ಬಿಎಸ್​ವೈ ಮುಂದೆ ಕಣ್ಣೀರಿಟ್ಟ‌ ರೇಣುಕಾಚಾರ್ಯ, ರಾಜುಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.