ಧಾರವಾಡ: ಕೋರಿಯರ್ ಸಾಗಿಸುವ ಕಂಟೈನರ್ ವಾಹನಕ್ಕೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಬೆಳಗಾವಿಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಕಂಟೈನರ್ ಲಾರಿ ಹುಬ್ಬಳ್ಳಿ ಮಾರ್ಗವಾಗಿ ತೆರಳುತ್ತಿತ್ತು. ಲಾರಿಯ ಕಂಟೈನರ್ ಬಾಕ್ಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಅದರಲ್ಲಿದ್ದ ವಸ್ತುಗಳು ಹೊತ್ತಿ ಉರಿದಿದೆ.
ಲಾರಿ ಚಾಲಕ ಯರಿಕೊಪ್ಪದ ರಮ್ಯಾ ರೆಸಿಡೆನ್ಸಿ ಬಳಿ ಲಾರಿ ನಿಲ್ಲಿಸಿ, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾನೆ. ಚಾಲಕನಿಗೆ ಸ್ಥಳೀಯರು ಹಾಗೂ ಗ್ರಾಮಸ್ಥರು ಸಾಥ್ ನೀಡಿದ್ದು, ಇದರ ಜೊತೆಗೆ ಅಗ್ನಿ ಶಾಮಕ ದಳ ಕೂಡಾ ಧಾವಿಸಿ ಬೆಂಕಿ ನಂಧಿಸಿದೆ. ಅಷ್ಟರಲ್ಲಾಗಲೇ ವಸ್ತುಗಳು ಸುಟ್ಟು ಹೋಗಿವೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ