ETV Bharat / state

ವರವಾದ ಲಾಕ್​ಡೌನ್: ಸೌರ ವಿದ್ಯುತ್‌ಚಾಲಿತ ಮೇವು ಕಟಾವು ಯಂತ್ರ ಆವಿಷ್ಕರಿಸಿದ ವಿದ್ಯಾರ್ಥಿ

ಕೊರೊನಾ ಲಾಕ್​ಡೌನ್​ ಅವಧಿಯನ್ನು ಸದುಪಯೋಗ ಮಾಡಿಕೊಂಡ ವಿದ್ಯಾರ್ಥಿಯೊಬ್ಬ ಸೌರ ವಿದ್ಯುತ್ ಚಾಲಿತ ಮೇವು ಕಟಾವು ಯಂತ್ರ ಸಂಶೋಧಿಸಿ ಮೆಚ್ಚುಗೆ ಗಳಿಸಿದ್ದಾನೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ..

A student who invented a solar powered forage harvesting machine
ಮೇವು ಕಟಾವು ಯಂತ್ರ ಆವಿಷ್ಕರಿಸಿದ ವಿದ್ಯಾರ್ಥಿ
author img

By

Published : Aug 19, 2021, 2:09 PM IST

ಧಾರವಾಡ: ಕೊರೊನಾ ಕರಿನೆರಳಿನಿಂದ ಶಾಲೆಗಳಿಲ್ಲದೆ ವಿದ್ಯಾರ್ಥಿಗಳು ತಮ್ಮ ಕ್ರಿಯಾಶೀಲತೆ ಕಳೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದ್ರೆ ಲಾಕ್​ಡೌನ್​ ಅವಧಿಯನ್ನು ಸದ್ಬಳಕೆ ಮಾಡಿಕೊಂಡು ವಿನೂತನ ಯಂತ್ರ ಆವಿಷ್ಕಾರ ಮಾಡುವ ಮೂಲಕ ಇಲ್ಲೊಬ್ಬ ವಿದ್ಯಾರ್ಥಿ ಗಮನ ಸೆಳೆದಿದ್ದಾನೆ.

ಹೌದು, ಧಾರವಾಡದ ನವಲೂರ ಗ್ರಾಮದ ಎಸ್ಎಸ್ಎಲ್​ಸಿ ವಿದ್ಯಾರ್ಥಿ ಬಸವರಾಜ ಜಾಪಣ್ಣವರ ಎಂಬಾತ ಕಡಿಮೆ ವೆಚ್ಚದಲ್ಲಿ ಸೌರ ವಿದ್ಯುತ್‌ಚಾಲಿತ ಕಳೆ ಕತ್ತರಿಸುವ ಯಂತ್ರ ತಯಾರಿಸಿದ್ದಾನೆ. ಅಲ್ಯೂಮಿನಿಯಂ ಪೈಪ್, ಸೋಲಾರ್ ಪ್ಯಾನಲ್, ಸೈಕಲ್​ ಟ್ಯೂಬ್ಲೆಸ್ ಚಕ್ರ, ಬ್ಯಾಟರಿ ಬಳಸಿಕೊಂಡು ಕೇವಲ 7 ಸಾವಿರ ರೂಪಾಯಿ ವೆಚ್ಚದಲ್ಲಿ ಮೇವು ಕಟಾವು ಯಂತ್ರ ಸಿದ್ಧಪಡಿಸಿದ್ದಾನೆ.

ಸೌರ ವಿದ್ಯುತ್‌ಚಾಲಿತ ಮೇವು ಕಟಾವು ಯಂತ್ರ ತಯಾರಿಸಿದ ವಿದ್ಯಾರ್ಥಿ

ಈ ಯಂತ್ರದ ಮುಂದೆ ಮೇವು ಕತ್ತರಿಸುವ ಬ್ಲೇಡ್​ ಅಳವಡಿಸಿದ್ದು, ಹಿಂಭಾಗದಲ್ಲಿ ಮೂರು ಬ್ಲೇಡ್ ಅಳವಡಿಸಿದ್ದಾನೆ. ಮುಂದಿರುವ ಬ್ಲೇಡ್​ಗೆ ಶಕ್ತಿ ಕೊಡಲು ಮೇಲುಗಡೆ ಸೋಲಾರ್ ಪ್ಯಾನಲ್ ಅಳವಡಿಸಿದ್ದು, ಅದನ್ನು ಬ್ಯಾಟರಿಗೆ ಜೋಡಿಸಿದ್ದಾನೆ. ಬ್ಯಾಟರಿ ಮೂಲಕವೇ ಬ್ಲೇಡ್​ಗಳನ್ನು ತಿರುಗಿಸುತ್ತ ಮೋಟಾರ್ ಕಾರ್ಯ ನಿರ್ವಹಿಸುತ್ತದೆ. ವಿದ್ಯಾರ್ಥಿಯ ಈ ಸಾಧನೆಗೆ ಶಿಕ್ಷಕರು ಹಾಗೂ ವಿವೇಕಾನಂದ ಯೂಥ್ ಮೂವ್‌ಮೆಂಟ್ ಸಹಾಯ ಮಾಡಿದೆ.

ಒಟ್ಟಿನಲ್ಲಿ ಸಂಕಷ್ಟ ಮತ್ತು ಸಾಧನೆ ಎರಡೂ ಒಂದೇ ನಾಣ್ಯದ ಭಿನ್ನ ಮುಖವಿದ್ದಂತೆ. ಚಿಕ್ಕ ವಯಸ್ಸಿನಲ್ಲೇ ಯಂತ್ರ ಆವಿಷ್ಕಾರ ಮಾಡಿ ಮಾದರಿಯಾಗಿರುವ ಈ ವಿದ್ಯಾರ್ಥಿ ಇತರರಿಗೆ ಪ್ರೇರಕ ಶಕ್ತಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.