ಹುಬ್ಬಳ್ಳಿ: ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನವನಗರದ ಎಲ್ಐಜಿ ಬಳಿ ನಡೆದಿದೆ. ಮಂಜುನಾಥ ಅಬ್ಬಿಗೇರಿ (30) ಮೃತ ವ್ಯಕ್ತಿ. ಈತ ಮೂಲತಃ ಧಾರವಾಡದ ಎತ್ತಿನಗುಡ್ಡದ ನಿವಾಸಿಯಾಗಿದ್ದು, ಕಳೆದ 9 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ನವನಗರದ ಎಲ್ಐಜಿ ಬಳಿ ಬಾಡಿಗೆ ಮನೆಯಲ್ಲಿ ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದ.
ಕಳೆದ ಮೂರು ದಿನಗಳ ಹಿಂದೆ ಮಂಜುನಾಥ ಅಬ್ಬಿಗೇರಿ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನಂತೆ. ಮಂಜುನಾಥ ಸಾವನ್ನಪ್ಪಿ ಮೂರು ದಿನಗಳು ಕಳೆದರೂ ಆತನ ಪತ್ನಿ ಮಾತ್ರ ಈ ಕುರಿತು ಮೃತನ ಕುಟುಂಬಸ್ಥರಿಗೆ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಇಂದು ಅಕ್ಕಪಕ್ಕದ ಮನೆಗಳಿಗೆ ಶವದ ವಾಸನೆ ಬರುತ್ತಿದ್ದಂತೆ ಸ್ಥಳೀಯರು ನವನಗರ ಎಪಿಎಂಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮಂಜುನಾಥ ಅಬ್ಬಿಗೇರಿ ಶವವನ್ನು ಕಿಮ್ಸ್ ಶವಗಾರಕ್ಕೆ ಕಳುಹಿಸಿದ್ದಾರೆ.
ಇದನ್ನೂ ಓದಿ:ಉತ್ತರಪ್ರದೇಶ ಚುನಾವಣೆ: ಹಕ್ಕು ಚಲಾಯಿಸಿ ಈ ವಿಶ್ವಾಸ ವ್ಯಕ್ತಪಡಿಸಿದ ಯೋಗಿ ಆದಿತ್ಯನಾಥ!
ಮಂಜುನಾಥ ಸಾವಿನ ಕುರಿತು ಸಂಶಯ ವ್ಯಕ್ತವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿಸಬೇಕೆಂದು ಮೃತನ ಕುಟುಂಬಸ್ಥರು ಆಗ್ರಹಿಸಿದ್ದಾರೆ.