ETV Bharat / state

ಹುಬ್ಬಳ್ಳಿ: ಸಾರ್ವಜನಿಕ ಸ್ಥಳದಲ್ಲಿ ಅರೆನಗ್ನನಾಗಿ ದುರ್ವರ್ತನೆ, ಆರೋಪಿ ವಿರುದ್ಧ ಪ್ರಕರಣ - ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸ್ಥಳದಲ್ಲೇ ವ್ಯಕ್ತಿಯಿಂದ ಅಸಭ್ಯ ವರ್ತನೆ

ರವಿವಾರ ರಾತ್ರಿ ಇಲ್ಲಿನ ನವನಗರದ ಕ್ಯಾನ್ಸರ್ ಆಸ್ಪತ್ರೆಯ ಎದುರಿನ ಬಸ್​​ ನಿಲ್ದಾಣದ ಬಳಿ, ವ್ಯಕ್ತಿಯೊಬ್ಬ ಬೈಕ್​ ಮೇಲೆ ಕುಳಿತುಕೊಂಡು ಅರೆನಗ್ನನಾಗಿ, ಅಸಭ್ಯವಾಗಿ ವರ್ತಿಸಿದ್ದಾನೆ. ಈತನ ದುರ್ವರ್ತನೆಗೆ ಯುವತಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲೇ ವ್ಯಕ್ತಿಯಿಂದ ಅಸಭ್ಯ ವರ್ತನೆ

author img

By

Published : Jan 3, 2022, 6:49 PM IST

ಹುಬ್ಬಳ್ಳಿ: ವ್ಯಕ್ತಿಯೋರ್ವ ಸಾರ್ವಜನಿಕ ಸ್ಥಳದಲ್ಲಿ ಅರೆನಗ್ನನಾಗಿ ಯುವತಿಯರ ಮುಂದೆ ಅಸಭ್ಯವಾಗಿ ವರ್ತಿಸಿದ ಘಟನೆ ನಗರದಲ್ಲಿ ನಡೆದಿದೆ.

ಶಾಂತನಗರದ ನಿವಾಸಿ ಬಸವರಾಜ ದೇವರಗುಡಿ ದುರ್ವರ್ತನೆ ತೋರಿದ ಆರೋಪಿ. ಈತ ರವಿವಾರ ರಾತ್ರಿ ಇಲ್ಲಿನ ನವನಗರದ ಕ್ಯಾನ್ಸರ್ ಆಸ್ಪತ್ರೆಯ ಎದುರಿನ ಬಸ್​​ ನಿಲ್ದಾಣದ ಬಳಿ, ಬೈಕ್​ ಮೇಲೆ ಕುಳಿತುಕೊಂಡು ಅರೆನಗ್ನನಾಗಿ, ಅಸಭ್ಯವಾಗಿ ವರ್ತಿಸಿದ್ದಾನೆ.

ಈ ಬಗ್ಗೆ ನವನಗರ ಪೊಲೀಸ್ ಠಾಣೆಗೆ ಯುವತಿಯರು ದೂರು ನೀಡಿದ್ದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವ್ಯಕ್ತಿಗೆ ಲಾಠಿಯೇಟು ಕೊಟ್ಟು, ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಅಸಭ್ಯ ವರ್ತನೆಯನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ​​ ಸೆರೆಹಿಡಿದು ಪೊಲೀಸರಿಗೆ ನೀಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.